Advertisement

ಜಿಎಸ್‌ಬಿ ಸೇವಾ ಸಂಘದ ವಾರ್ಷಿಕೋತ್ಸವ

03:02 PM Feb 15, 2018 | Team Udayavani |

ಕದ್ರಿ : ಭಾರತದಲ್ಲಿ ಸಂಗೀತ, ನೃತ್ಯ, ಚಿತ್ರಕಲೆಗಳಂತಹ ಲಲಿತಕಲೆಗಳು ಸಮೃದ್ಧವಾಗಿದ್ದು ವೃತ್ತಿ ಜೀವನಕ್ಕೆ ಇವುಗಳಲ್ಲಿ ವಿಪುಲ ಅವಕಾಶಗಳಿವೆ. ಈಗಿನ ತಲೆಮಾರಿನ ಯುವಜನರು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಪ್ರೊ| ಡಾ| ಕಸ್ತೂರಿ ಮೋಹನ ಪೈ ಹೇಳಿದರು. ಸುಜೀರ್‌ ಸಿ.ವಿ. ನಾಯಕ್‌ ಸಭಾಗೃಹದಲ್ಲಿ ನಡೆದ ಜಿಎಸ್‌ಬಿ ಸೇವಾ ಸಂಘದ 80ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.

Advertisement

ಹವ್ಯಾಸ ಬೆಳೆಸಿಕೊಳ್ಳಿ
ಮುಖ್ಯ ಅತಿಥಿ, ಸಿತಾರ ಕಲಾವಿದ ಅಂಕುಶ್‌ ಎನ್‌. ನಾಯಕ್‌ ಮಾತನಾಡಿ, ಭಾರತೀಯ ಕಲಾ ಪ್ರಾಕಾರಗಳು ಬಹಳ ಶ್ರೀಮಂತವಾಗಿದ್ದು, ವಿದ್ಯಾರ್ಥಿ ಜೀವನದಲ್ಲೇ ಕಲೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅದು ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ ಎಂದರು.

ಸಾಂಸ್ಕೃತಿಕ ಕಲಾ ಮಿಲನ ಉದ್ಘಾಟನೆ
ಹಿರಿಯ ಚಿತ್ರಕಲಾವಿದ ವಿಷ್ಣು ಶೇವಗೂರ ಸಾಂಸ್ಕೃತಿಕ ಕಲಾ ಮಿಲನ ಉದ್ಘಾಟಿಸಿದರು. 150ಕ್ಕೂ ಅಧಿಕ ಮಂದಿ ಎಳೆಯರಿಗಾಗಿ ಹಿಂದೂಸ್ಥಾನಿ, ಕರ್ನಾಟಕ್‌, ವಾದ್ಯ ಸಂಗೀತ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ಆಡಳಿತ ಮಂಡಳಿಯ ಪಂಡಿತ್‌ ಸುರೇಂದ್ರ ಆಚಾರ್ಯ, ವಿಜಯಚಂದ್ರ ಕಾಮತ್‌, ಮಾಧವರಾಯ ಪ್ರಭು, ವೆಂಕಟೇಶ ಬಾಳಿಗ, ಪ್ರೇಮಾನಂದ ಮಲ್ಯ ಬಹುಮಾನ ವಿತರಿಸಿದರು.

ಗೌರವ ಖಜಾಂಚಿ ಜಿ. ವಿಶ್ವನಾಥ ಭಟ್‌ ಸೇವಾ ಕಾರ್ಯದ ವಿವರ ನೀಡಿದರು. ಸಂಯೋಜಕ ಯು. ಪ್ರಕಾಶ ಶೆಣೈ
ನೇತೃತ್ವದಲ್ಲಿ ಸಾಧನಾ ಬಳಗ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ‘ಮಧುರ ಕೊಂಕಣಿ’ ಸಮೂಹ ಗಾನ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನಡೆಯಿತು. ಡಾ| ರಮೇಶ ಪೈ ಸ್ವಾಗತಿಸಿದರು. ಉಷಾ ಪೈ ಅತಿಥಿಗಳನ್ನು ಪರಿಚಯಿಸಿದರು. ಅಶ್ವಿ‌ನ್‌ ಭಟ್‌, ಶಿಕ್ಷಕಿ ಪ್ರತಿಮಾ ಪ್ರಭು, ಸ್ಮಿತಾ ಶೆಣೈ, ಭಾರತಿ ಶೇವಗೂರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next