Advertisement

22ರಂದು ಜನ್ಮಶತಮಾನೋತ್ಸವ, ಪ್ರಶಸ್ತಿ ಪ್ರದಾನ

12:12 PM Mar 08, 2018 | Team Udayavani |

ಬೆಂಗಳೂರು: ಕರ್ನಾಟಕಕ್ಕೆ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ನೀಡಿದ ಕನ್ನಡ ಚಳವಳಿಕಾರ, ಸಾಹಿತಿ ದಿವಂಗತ ಮ.ರಾಮಮೂರ್ತಿ ಅವರ ಜನ್ಮಶತಮಾನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಮಾ.22ರಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯಲಿದೆ.

Advertisement

ಕಸಾಪ ವತಿಯಿಂದ ನಡೆಯುವ ಕಾರ್ಯಕ್ರಮವನ್ನು ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಉದ್ಘಾಟಿಸುವರು. ಇದೇ ವೇಳೆ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ ಸಂಪಾದಿಸಿರುವ  “ಕನ್ನಡ ವೀರ ಸೇನಾನಿ’ ಮ.ರಾಮಮೂರ್ತಿ ಅವರ ಶತಮಾನೋತ್ಸವದ ನೆನಪಿನ ಸಂಪುಟವನ್ನು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಲೋಕಾರ್ಪಣೆ ಮಾಡುವರು.

ಕಾರ್ಯಕ್ರಮದಲ್ಲಿ ಬೆಳಗಾವಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ ಕೊಡಮಾಡುವ ಕನ್ನಡ ವೀರ ಸೇನಾನಿ ರಾಮಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25 ಸಾವಿರ ರೂ. ನಗದು ಒಳಗೊಂಡಿದೆ. ಮ.ರಾಮಮೂರ್ತಿ ಅವರ ಪತ್ನಿ ಕಮಲಮ್ಮ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್‌ ತಿಳಿಸಿದ್ದಾರೆ.

ಕನ್ನಡ ವೀರ ಸೇನಾನಿ ಸ್ಮರಣ ಗ್ರಂಥ: ಸಾಹಿತ್ಯ ಕೃಷಿ ಮಾಡಿದ ರಾಮಮೂರ್ತಿ ಅವರು ನಿಧನರಾದ ದಿನದಿಂದ ಇಂದಿನವರೆಗೆ ಅವರ ಕುರಿತಾಗಿ ಪತ್ರಿಕೆ, ಸ್ಮರಣ ಸಂಚಿಕೆಗಳಲ್ಲಿ ಬಂದ 25 ಲೇಖನಗಳು, ಅವರು ಬಾವಿಯಲ್ಲಿ ಕುಸಿದು ಹೋದ ಕುರಿತ ಪತ್ರಿಕಾ ವರದಿಗಳು ಸೇರಿದಂತೆ ಕನ್ನಡ ಕವಿಗಳ ಕುರಿತ ಲೇಖನಗಳನ್ನು ರಾ.ನಂ.ಚಂದ್ರಶೇಖರ್‌ ಸಂಪಾದಿಸಿ ಕನ್ನಡ ವೀರ ಸೇನಾನಿ ಸ್ಮರಣ ಗ್ರಂಥ ಸಿದ್ಧಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next