Advertisement
ಮೋದಿ ವಿಶೇಷ ಆಸಕ್ತಿ
Related Articles
Advertisement
ಭಾರತದಿಂದ ಕಳವಾಗಿರುವ ವಿಗ್ರಹಗಳನ್ನು ಹುಡುಕುವಲ್ಲಿ ಇಂಡಿಯಾ ಪ್ರೈಡ್ ಎಂಬ ಎನ್‌ಜಿಎ ಸಂಘಟನೆಯ ಶ್ರಮವೂ ಇದೆ. 2014ರಲ್ಲಿ ವಿಜಯಕುಮಾರ್ ಮತ್ತು ಅನುರಾಗ್ ಸಕ್ಸೇನಾ ಎಂಬವರು ಇದನ್ನು ಸ್ಥಾಪಿಸಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರ ಗುಂಪೇ ಇದೆ. ಇವರ ಶ್ರಮದಿಂದ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳು ಇಂಗ್ಲೆಂಡ್‌ನಲ್ಲಿ ಇರುವುದು ಪತ್ತೆಯಾಗಿತ್ತು.
ಮನ್ ಕೀ ಬಾತ್ ನಲ್ಲಿ ಮೋದಿ ಹೇಳಿದ್ದು
ಭಾನುವಾರ ತಮ್ಮ ಮನ್ ಕೀಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅನ್ನ ಪೂರ್ಯಾ ದೇವಿಯ ವಿಗ್ರಹವು ಕೆನಡಾದಿಂದ ವಾಪಸ್ ಬರುತ್ತಿರುವ ಮಾಹಿತಿ ನೀಡಿದರು. ಇದನ್ನು 100 ವರ್ಷಗಳ ಹಿಂದೆ ಕಳವು ಮಾಡಲಾಗಿತ್ತು. ಈ ವಿಗ್ರಹ ಮರಳಿಸುತ್ತಿರುವ ಕೆನಡಾ ಸರಕಾರಕ್ಕೆ ಮೋದಿ ಕೃತಜ್ಞತೆ ಸಲ್ಲಿಸಿದರು. 18ನೇ ಶತಮಾನದಲ್ಲಿ ಪೇಶ್ವೆ ಬಾಜೀರಾವ್ ಕಾಲದಲ್ಲಿ ನಿರ್ಮಿಸಲಾಗಿದ್ದ ದೇಗುಲದಿಂದ ಈ ವಿಗ್ರಹವನ್ನು ಕಳವು ಮಾಡಲಾಗಿತ್ತು.
ರಾಮ, ಲಕ್ಷ್ಮಣ, ಸೀತೆಯ ಮೂರ್ತಿಗಳು
ಇತ್ತೀಚೆಗಷ್ಟೇ ಇಂಗ್ಲೆಂಡ್ ನಿಂದ ರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳನ್ನು ವಾಪಸ್ ತರಿಸಲಾಗಿದೆ. ಇವು ವಿಜಯನಗರ ಕಾಲದವು. 1978ರಲ್ಲಿ ತಮಿಳುನಾಡಿನಿಂದ ಇವುಗಳನ್ನು ಕಳವು ಮಾಡಲಾಗಿತ್ತು. ಇಂಗ್ಲೆಂಡ್ ಸರಕಾರದ ಜತೆ ಮಾತುಕತೆ ನಡೆಸಿ ವಾಪಸ್ ತರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದ್ದಾರೆ. ಮೋದಿ ಅವರ ಆಸ ಕ್ತಿಯಿಂದಾಗಿ ದೇಶದ ಸಾಂಸ್ಕೃ ತಿಕ ಸಂಪ ತ್ತನ್ನು ವಾಪಸ್ ತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ವಿಗ್ರಹಗಳನ್ನು ಶನಿವಾರವಷ್ಟೇ ನಾಗಪಟ್ಟಣ ಜಿಲ್ಲೆಯ ಆನಂದಮಂಗಲಂನ ದೇಗುಲದಲ್ಲಿ ಪುನರ್ ಪ್ರತಿಷ್ಠಾಪನೆ ನಡೆಸಲಾಗಿದೆ.