ಚಿಕ್ಕಮಗಳೂರು: ಜಿಲ್ಲೆ ಹೊರನಾಡು ಶ್ರೀಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ಅ.15ರಿಂದ 26ರ ವರೆಗೆ ಶರನ್ನವರಾತ್ರಿ ಮಹೋತ್ಸವ ಆಚರಣೆ ನಡೆಯಲಿದೆ.
ಅ.26ರಂದು ಮಹಾಚಂಡಿಕಾಹೋಮ ಧರ್ಮಕರ್ತಡಾ|ಭೀಮೇಶ್ವರ ಜೋಷಿ ಅವರ ಪಟ್ಟಾಭಿಷೇಕೋತ್ಸವದ ಅಂಗವಾಗಿ ಜೀವ- ಭಾವ ಕಾರ್ಯಕ್ರಮ ಮತ್ತು ಶ್ರೀಮಾತಾ ಪ್ರಶಸ್ತಿ ಪ್ರದಾನ ನಡೆಯಲಿದೆ. ಅ.15ರಿಂದ 26ರ ವರೆಗೆ ಪ್ರತಿನಿತ್ಯ ವಾದ್ಯ ಸಂಗೀತ ಮತ್ತು ದೇವಿ ಮಹಾತ್ಮೆ ಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ.
ಅ.15ರಂದು ಹಂಸಾರೂಢಾ ಸರಸ್ವತಿ, ಪಂಚದುರ್ಗಾ ಹೋಮ, ಅ.16ರಂದು ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರ, ಮಹಾಲಕ್ಮಿà ಮೂಲಮಂತ್ರ ಹೋಮ, ಅ.17ರಂದು ಸಿಂಹಾರೂಢಾ ಚಂದ್ರಘಂಟಾ ಅಲಂಕಾರ, ಪುರುಷಸೂಕ್ತ ಹೋಮ, ಅ.18ರಂದು ಮೃಗಾರೂಢ ಕೂಷ್ಮಾಂಡ ಅಲಂಕಾರ, ಶ್ರೀಸೂಕ್ತ ಹೋಮ, ಅ.19ರಂದು ಮಕರಾರೂಢಾ ಸ್ಕಂದಮಾತಾ ಅಲಂಕಾರ, ಶ್ರೀ ಲಲಿತಾ ಮೂಲಮಂತ್ರ ಹೋಮ ನಡೆಯಲಿದೆ.
ಅ.20ರಂದು ಮಯೂರರೂಢಾ ಕಾತ್ಯಾಯಿನೀ ಅಲಂಕಾರ, ಶ್ರೀಸರಸ್ವತಿ ಮೂಲಮಂತ್ರ ಹೋಮ, ಶ್ರೀ ಶಾರದಾ ಪೂಜೆ, ಅ.21ರಂದು ಅಶ್ವಾರೂಢ ಗೌರೀ ಅಲಂಕಾರ, ಶ್ರೀವಾಗೀಶ್ವರೀ ಮೂಲಮಂತ್ರ ಹೋಮ, ಅ.22ರಂದು ವೃಷಭಾರೂಢ ತ್ರಿಮೂರ್ತಿ ಅಲಂಕಾರ, ಶ್ರೀ ದುರ್ಗಾ ಮೂಲಮಂತ್ರ ಹೋಮ, ಅ.23ರಂದು ಸಿಂಹಾರೂಢಾ ಸಿದ್ದಿಧಾತ್ರೀ ಅಲಂಕಾರ, ಚಂಡಿಕಾಮೂಲಮಂತ್ರ ಹೋಮ, ಆಯುಧ ಪೂಜೆ, ಅ.24ರಂದು ವಿಜಯ ದಶಮಿ, ವಿಜಯೋತ್ಸವ, ಅ.25ರಂದು ಶ್ರೀ ಉದ್ಭವ ಗಣಪತಿ ಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ಸನ್ನಿ ಧಿಯಲ್ಲಿ ವಿಶೇಷ ಪೂಜೆ, ಅ.26ರಂದು ಮಹಾ ಚಂಡಿಕಾಹೋಮ, ಪಟ್ಟಾಭಿಷೇಕೋತ್ಸವದ ಅಂಗವಾಗಿ ಧರ್ಮಕರ್ತರಿಂದ ಶ್ರೀಮಾತೆಗೆ ಮಹಾಭಿಷೇಕ ವಿಶೇಷ ಪೂಜೆ, ಮಹಾ ಚಂಡಿಕಾಹೋಮ, ಶ್ರೀ ನವಗ್ರಹ ಹೋಮ ನಡೆಯಲಿದೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.