Advertisement

ಅನ್ನದಾತ, ಜನರ ಹಿತ ಕಾಯಲು ಮೈತ್ರಿ ಅನಿವಾರ್ಯ:ಎಚ್‌.ಡಿ.ಕುಮಾರಸ್ವಾಮಿ

11:31 PM Mar 31, 2024 | Team Udayavani |

ಶಿರಾ: ಕಳಸ ಬಂಡೂರಿ ನೀರಾವರಿ ಯೋಜನೆ ಸಹಿತ ಕಾವೇರಿ ನೀರಿನ ವಿಚಾರದಲ್ಲೂ ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಅನ್ನದಾತ ಮತ್ತು ಜನರ ಹಿತ ಕಾಯುವ ನೀರಾವರಿ ಯೋಜನೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು, ಇದಕ್ಕೆ ಗಟ್ಟಿ ಧ್ವನಿಯಾಗಿ ಕೆಲಸ ಮಾಡುವ ಸದುದ್ದೇಶದಿಂದ ಮೈತ್ರಿ ಅನಿವಾರ್ಯ ಎಂದು ಮಂಡ್ಯ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ತಾಲೂಕಿನ ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳನ್ನು ರವಿವಾರ ಭೇಟಿ ಮಾಡಿ ಆಶೀರ್ವಾದ ಪಡೆದ ಅವರು, ಜನಸಾಮಾನ್ಯರ ಸಮಸ್ಯೆಗಳಿಗೆ ಗಟ್ಟಿ ಧ್ವನಿಯಾಗಲು ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಾಗಿದೆ. ರಾಜ್ಯದ ಜನರ ಮೇಲೆ ವಿಶ್ವಾಸವಿದ್ದು, ಈ ಬಾರಿ ಮೈತ್ರಿಕೂಟ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದರು.
ಶ್ರೀನಂಜಾವಧೂತ ಮಹಾ ಸ್ವಾಮೀಜಿ ಮಾತನಾಡಿ, ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು.

ಲಘು ಮಾತು ಸರಿಯಲ್ಲ: ನಿಖಿಲ್‌
ಶ್ರೀರಂಗಪಟ್ಟಣ: ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ಬಾರಿ ಹೊಸ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರ ಚಿಕಿತ್ಸೆ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌-ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ತಂದೆಯ ಬಳಿ ಪ್ರತಿದಿನ ಕಷ್ಟ ಹೇಳಿಕೊಂಡು ಸಾಕಷ್ಟು ಜನ ಬರುತ್ತಾರೆ. ಯಾರೋ ಗುತ್ತಿಗೆದಾರರು, ದುಡ್ಡು ಇರುವವರು ಬರುವುದಿಲ್ಲ. ಕುಮಾರಸ್ವಾಮಿ ಮಾತೃ ಹೃದಯ ಇರುವ ವ್ಯಕ್ತಿ ಎಂದರು.ಬೆಂಗಳೂರು ಗ್ರಾಮಾಂತರದಲ್ಲಿ ಡಾ| ಮಂಜುನಾಥ್‌ ಅವರ ಪರ ಪಕ್ಷಾತೀತವಾಗಿ ಅಲೆ ಎದ್ದಿದೆ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next