ಕುಷ್ಟಗಿ: ಪ್ರಾತಃಕಾಲ ಶ್ರೀ ಶರಣಬಸವೇಶ್ವರ ಸನ್ನಿಧಿಯಲ್ಲಿ ಕತೃ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಗಳು ಜರುಗಿದವು. ನಂತರ ಶ್ರೀ ಮಠದ ಆವರಣದಲ್ಲಿ ಚಳಗೇರಾದ ಶ್ರೀ ವೀರ ಸಂಗಮೇಶ ಶಿವಾಚಾರ್ಯ ರರು, ಮಣಿಕಟ್ಟಿಯ ವಿಶ್ವರಾಧ್ಯ ಶಿವಾಚಾರ್ಯರರು, ನಿಡಶೇಸಿಯ ಪಶ್ಚಕಂಥಿ ಹಿರೇಮಠದ ಕಿರಿಯ ಶ್ರೀಗಳಾದ ವಿಶ್ವರಾಧ್ಯಸ್ವಾಮೀಜಿ ಸಾನಿಧ್ಯದಲ್ಲಿ 16 ಜೋಡಿಗಳ ಸಾಮೂಹಿಕ ವಿವಾಹ ಮಹೀತ್ಸವ ಜರುಗಿತು. ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 68 ಜನ ಭಕ್ತಾಧಿಗಳು ರಕ್ತದಾನ ಮಾಡಿದರು.
ಸಂಜೆ ಗೋಧೂಳಿ ಸಮಯದಲ್ಲಿ ಶ್ರೀ ಶರಣಬಸವೇಶ್ವರ ರಥತೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ರಥದ ಮನೆಯಿಂದ ಪಾದಗಟ್ಟೆಯವರೆಗೆ ನಡೆದ ಮಹಾರಥೋತ್ಸವದಲ್ಲಿ ಭಕ್ತರು ರಥದ ಹಗ್ಗ ಎಳೆದು ಭಕ್ತಿ ಸೇವೆ ಸಲ್ಲಿಸಿದರು. ಸಾಗಿದ ರಥಕ್ಕೆ ಭಕ್ತಾಧಿಗಳು ಉತ್ತತ್ತಿ ಎಸೆದು ಧನ್ಯತಭಾವ ಸಮರ್ಪಿಸಿದರು.
ಈ ರಥೋತ್ಸವದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಕೆ.ಮಹೇಶ, ದೊಡ್ಡಬಸನಗೌಡ ಪಾಟೀಲ ಬಯ್ಯಾಪೂರ, ಸಂಗಯ್ಯ ಹಿರೇಮಠ, ತಳವಗೇರಾ ಗ್ರಾ.ಪಂ. ಅಧ್ಯಕ್ಷ ದ್ಯಾಮಣ್ಣ ಗುಡಳ್ಳಿ ಮತ್ತೀತರಿದ್ದರು.
.