Advertisement

96,500 ನಿರಾಶ್ರಿತರಿಗೆ ಅನ್ನದಾಸೋಹ

04:16 PM May 06, 2020 | sudhir |

ಉಡುಪಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಡುಪಿ ನಗರದಾದ್ಯಂತ ಇರುವ ನಿರಾಶ್ರಿತರಿಗೆ ಶಾಸಕ ರಘುಪತಿ ಭಟ್‌ರವರ ಮಾರ್ಗದರ್ಶನದಲ್ಲಿ, ಯಶ್‌ಪಾಲ್‌ ಸುವರ್ಣ ಮತ್ತು ಪ್ರವೀಣ್‌ ಶೆಟ್ಟಿ ಕಪ್ಪೆಟ್ಟು ಅವರ ನೇತೃತ್ವದಲ್ಲಿ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲ ಶೋತ್ಸವ ಸಮಿತಿಯಿಂದ 96,500 ರಾತ್ರಿ ಊಟ ಹಾಗೂ ಸುಮಾರು 5.40 ಲಕ್ಷ ವೆಚ್ಚದಲ್ಲಿ ಉಡುಪಿ ನಗರ ಸಭಾ ವ್ಯಾಪ್ತಿಯ 219 ಮಂದಿ ಪೌರಕಾರ್ಮಿಕರಿಗೆ ತಲಾ 2000 ಗೌರವಧನ ಹಾಗೂ 10 ಕೆ.ಜಿ. ಅಕ್ಕಿಯನ್ನು ವಿತರಿಸಲಾಗಿದೆ.
ಎ. 15 ರಿಂದ ಆರಂಭಗೊಂಡು ಮೇ 3 ರವರೆಗೆ 19 ದಿನಗಳು ನಿರಂತರ 35 ಕೇಂದ್ರಗಳಲ್ಲಿ ದಿನಂಪ್ರತಿ 5500 ಮಂದಿಗೆ ಊಟವನ್ನು ವಿತರಿಸಲಾಗಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಡಾ| ಜಿ. ಶಂಕರ್‌, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಉಡುಪಿ ಮದರ್‌ಆಫ್‌ ಸಾರೋಸ್‌ಚರ್ಚ್‌ನ ಧರ್ಮಗುರುಗಳಾದ ಫಾ| ವೆಲೇರಿಯನ್‌ ಮೆಂಡೋನ್ಸಾ, ಶಾಸಕರಾದ ಸುನೀಲ್‌ಕುಮಾರ್‌, ಬಿ. ಎಂ. ಸುಕುಮಾರ್‌ ಶೆಟ್ಟಿ, ಲಾಲಾಜಿಮೆಂಡನ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌ ಮೊದಲಾದ ಗಣ್ಯರು ಆಹಾರ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಸಮಿತಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಉಡುಪಿ ಪುರಭವನದ ಪಾಕಶಾಲೆಯಲ್ಲಿ ಪುರುಷೋತ್ತಮ ಶೆಟ್ಟಿಯವರ ಸಹಕಾರದಿಂದ ಸುರಕ್ಷತಾ ಕ್ರಮಗಳೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಹಾರ ತಯಾರಿಸಿ ವಿತರಿಸಲಾಗಿದ್ದು, ದಾನಿಗಳು ಸ್ವಯಂಪ್ರೇರಿತರಾಗಿ ಈ ಯೋಜನೆಗೆ ಸಹಕಾರವನ್ನು ನೀಡಿದ್ದಾರೆ.

ಯಾರೂ ಹಸಿವಿನಿಂದ ಮಲಗಬಾರದೆಂಬ ಸದುದ್ದೇಶದಿಂದ ಹಮ್ಮಿಕೊಂಡ ಈ ರಾತ್ರಿ ಊಟ ವಿತರಣೆಯ ಮೂಲಕ 96,500 ಮಂದಿಯ ಹಸಿವನ್ನು ತಣಿಸಿದ ಸಂತೃಪ್ತಿ ಸಿಕ್ಕಿದೆ. 150ಕ್ಕೂ ಅಧಿಕ ಸ್ವಯಂಸೇವಕರು ಈ ಯೋಜನೆಯ ಯಶಸ್ಸಿಗಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ನಗರದ ಸ್ವತ್ಛತೆಗಾಗಿ ಹಗಲಿರುಳು ದುಡಿಯುವ 219 ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನೂ ಸಮಿತಿಯ ಮುಖಾಂತರ ಮಾಡಿದ್ದೇವೆ.
-ಯಶ್‌ಪಾಲ್‌ ಸುವರ್ಣ, ಅಧ್ಯಕ್ಷರು,ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next