ಮಂಡ್ಯ: ಮೈಸೂರು ಹಾಗೂ ಮಂಡ್ಯ ಜಿಲ್ಲೆ ಯ 154 ಶಾಲೆ ಗಳಲ್ಲಿರುವ 16,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಮಹತ್ಕಾರ್ಯಕ್ಕೆ ಅಕ್ಷಯ ಫೌಂಡೇಷನ್ ಇದೀಗ ಕಾರ್ಯೋನ್ಮುಖವಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಅಡುಗೆ ಮನೆಗೆ ಭಾನುವಾರ ಸಂಸದೆ ಸುಮಲತಾ, ಶಾಸಕ ರವೀಂದ್ರ ಶ್ರೀಕಂಠಯ್ಯ, ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತದಾಸ್ ವಿದ್ಯುಕ್ತ ಚಾಲನೆ ನೀಡಿದರು.
ಏಕಕಾಲಕ್ಕೆ ಬಿಸಿಯೂಟ ತಯಾರಿ : ಮಂಡ್ಯ ಹಾಗೂ ಮೈಸೂರು ಜಿಲ್ಲೆಯ 20 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಏಕಕಾಲಕ್ಕೆ ಬಿಸಿಯೂಟ ತಯಾರಿಸುವ ಸಾಮರ್ಥ್ಯವನ್ನು ಈ ಅಡುಗೆ ಮನೆ ಒಳಗೊಂಡಿದೆ. ತಾಜಾ, ಪೌಷ್ಟಿಕ, ಶುಚಿ ಮತ್ತು ರುಚಿಕರವವಾದ ಮಧ್ಯಾಹ್ನದ ಊಟವನ್ನು ಮಕ್ಕಳಿಗೆ ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ. ವಿಶೇಷತೆಗಳು ಏನು? ಅಕ್ಷಯ ಪಾತ್ರ ಫೌಂಡೇಷನ್ ನಿರ್ಮಿಸಿರುವ ಅಡುಗೆ ಮನೆಯಲ್ಲಿ ಒಂದು ಗಂಟೆಗೆ 2500 ಚಪಾತಿ ತಯಾರಿಸ ಬಹುದು. ಸರ್ಕಾರದಿಂದ ಪೂರೈ ಕೆ ಯಾಗುವ ಅಕ್ಕಿಯನ್ನು ಹದವಾಗಿ ಸಮ್ಮಿಶ್ರಣಗೊಳಿಸಿ, ಅಕ್ಕಿಯಲ್ಲಿರುವ ಪೌಷ್ಟಿಕಾಂಶ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಪ್ರತ್ಯೇಕ ಸಮ್ಮಿಶ್ರಣ ಯಂತ್ರವನ್ನು ಅಳವಡಿಸಲಾಗಿದೆ. ಇದರಿಂದ ಮೈಕ್ರೋ-ಮ್ಯಾಕ್ರೋ ನ್ಯೂಟ್ರೀಷಿಯನ್ ಪ್ರಮಾಣವನ್ನು ಸುರಕ್ಷಿತವಾಗಿ ಕಾಪಾಡಿ ಕೊಳ್ಳಬಹುದು.
ಕಬ್ಬಿನ ರಚ್ಚಿನ ಮೂಲಕ ಇಂಧನ : ಈ ಅಡುಗೆ ಮನೆಯಲ್ಲಿ 1000 ಮಕ್ಕಳಿಗೆ 1 ಗಂಟೆಯಲ್ಲಿ ಅನ್ನ ತಯಾರು ಮಾಡಬಹುದು ಹಾಗೂ 5000 ಮಕ್ಕಳಿಗೆ 65 ನಿಮಿಷದಲ್ಲೇ ಸಾಂಬಾರ್ ತಯಾರಿಸುವ ಸಾಮರ್ಥ್ಯವುಳ್ಳ ಆಧುನಿಕ ತಂತ್ರಜ್ಞಾನದ ಸ್ಟೀಮ್ ಬೇಸ್ಡ್ ಅಡುಗೆ ಮನೆಯಾಗಿದೆ. ಇಲ್ಲಿ ಅಡುಗೆ ತಯಾರಿಕೆಗೆ ವಿದ್ಯುತ್, ಗ್ಯಾಸ್ ಬಳಸಲಾಗುವುದಿಲ್ಲ. ಪರಿಸರ ಸ್ನೇಹಿಯಾದ ಒಟ್ಟು ಹಾಗೂ ಕಬ್ಬಿನ ರಚ್ಚಿನ ಮೂಲಕ ಇಂಧ ನವನ್ನು ಸೃಷ್ಟಿ ಸಿ ಕೊಂಡು ಅಡುಗೆ ತಯಾರಿಸಲಾಗುತ್ತದೆ.
ಏಕಕಾಲಕ್ಕೆ 3000 ಮಕ್ಕಳಿಗೆ ಊಟ: ಅಡುಗೆ ತಯಾರಾದ ಬಳಿಕ ಅದರ ತಾಜಾತನ, ಪೌಷ್ಟಿಕತೆ, ಶುಚಿ ಮತ್ತು ರುಚಿಯನ್ನು ಕಾಯ್ದುಕೊಳ್ಳಲು ವಿಶೇಷ ವಾಹನ ಗಳನ್ನು ಅಕ್ಷಯ ಪಾತ್ರ ಫೌಂಡೇಷನ್ ವತಿ ಯಿಂದಲೇ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ 3000 ಮಕ್ಕಳಿಗೆ ಒಂದು ವಾಹನದಲ್ಲಿ ಸ್ಟೀಲ್ ಬಾಕ್ಸ್‌ಗಳಲ್ಲಿ ತುಂಬಿ ಊಟವನ್ನು ಕೊಂಡೊಯ್ಯಬಹುದು.
35 ಲೀಟರ್ ತ್ಯಾಜ್ಯ ನೀರು ಸಂಸ್ಕರಣಾ: ಅಡುಗೆ ಮನೆಯಲ್ಲಿ ಸೃಷ್ಟಿಯಾಗುವ ಘನ ಹಾಗೂ ದ್ರವ ತ್ಯಾಜ್ಯಗಳನ್ನು ಸಂಸ್ಕರಣೆ ಮಾಡಲು ಘಟಕ ವನ್ನು ಸ್ಥಾಪಿಸಲಾಗಿದೆ. ಇದು ಏಕಕಾಲಕ್ಕೆ 35 ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಣಾ ಮಾಡುತ್ತ ದೆ. ಈ ಸಂಸ್ಕರಿಸಿದ ನೀರನ್ನು ಕೃಷಿ ಉದ್ದೇಶಗಳಿಗೆ ಬಳಕೆ ಮಾಡ ಲಾಗು ತ್ತಿದೆ ಎಂದು ಫೌಂಡೇಷನ್‌ನ ನವೀನ ನೀರದದಾಸ ತಿಳಿಸಿದರು.
ಊಟ ಒದಗಿಸುವುದಕ್ಕೆ ವ್ಯವಸ್ಥೆ: ಈಗಾಗಲೇ ಮಹದೇವಪುರದ 2000 ಮಕ್ಕಳಿಗೆ ಬಿಸಿಯೂಟವನ್ನು ಅಕ್ಷಯ ಪಾತ್ರ ಫೌಂಡೇಷನ್ ವತಿಯಿಂದಲೇ ನೀಡುತ್ತಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಪ್ರಮುಖವಾಗಿ ಪರಿಗಣಿಸಿ ಬಿಸಿಯೂಟ ನೀಡಲಾಗುತ್ತಿದೆ. ಖಾಸಗಿಶಾಲೆಗಳಿಂದ ಮನವಿ ಬಂದರೆ ಅವರಿಗೂ ಊಟ ಒದಗಿಸುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಅಡುಗೆ ಮನೆಯಲ್ಲಿ ಉದ್ಯೋಗವಕಾಶ: ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವ ಯಂತ್ರಗಳನ್ನು ಅಳವಡಿಸಲಾಗಿದ್ದು, ಕೋಲ್ಡ್ ಸ್ಟೋರೇಜ್ ನಲ್ಲಿ ತರಕಾರಿ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸಂಗ್ರಹಿಸಿಡಲಾಗುವುದು. ಸ್ಥಳೀಯ ಮಹಿಳೆಯರು ಹಾಗೂ ಯುವಕರಿಗೆ ಅಡುಗೆಮನೆಯಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಹೊಸ ಅಡುಗೆ ಮನೆಯ ವಿವಿಧ ಭಾಗಗಳಲ್ಲಿ ರೈತ ಸಮುದಾಯಕ್ಕೆ ಸೇರಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
-ಮಂಡ್ಯ ಮಂಜುನಾಥ್