ಮುಂಡರಗಿ: ಕೊರೊನಾ ವೈರಸ್‌ಗೆ ಜನತೆ ಭಯಪಡುವಂತಾಗಿದೆ. ಆರ್ಥಿಕವಾಗಿ, ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುವ ಸೋಂಕಿತರಿಗೆ ಆಹಾರ ಪಾಕೆಟ್ ವಿತರಣೆ ಮಾಡಲಾಗುತ್ತಿದೆ. ಶ್ರೀಮಠದ ಪ್ರಸಾದ ಸ್ವೀಕರಿಸಿ ಸೋಂಕಿತರು ಶೀಘ್ರ ಗುಣಮುಖರಾಗಲಿ ಎಂದು ಜಗದ್ಗುರು ಡಾ|ಅನ್ನದಾನೀಶ್ವರ ಮಹಾಸ್ವಾಮೀಜಿ ಹಾರೈಸಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ವತಿಯಿಂದ ತಾಲೂಕು ಆಸ್ಪತ್ರೆಯಲ್ಲಿರುವ ಕೊರೊನಾ ಸೊಂಕೀತರಿಗೆ ಆಹಾರ ಪಾಕೆಟ್ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅನ್ನ-ಜ್ಞಾನದ ದಾಸೋಹ ಕೇಂದ್ರವಾಗಿರುವ ಶ್ರೀಮಠ ಕೊರೊನಾದಂತಹ ಮಾರಕ ಕಾಯಿಲೆಯ ಸಂಕಷ್ಟದ ಪರಿಸ್ಥಿತಿಯಲ್ಲಿ ಶ್ರೀಮಠದ ಭಕ್ತರು ಕೊರೊನಾ ರೋಗಿಗಳಿಗೆ ಆಹಾರ ಪ್ಯಾಕೆಟ್ ನೀಡಲು ಮುಂದಾಗಿದ್ದಾರೆ. ಶ್ರೀಮಠದಿಂದ ಸಂಕಷ್ಟದ ಸಂದರ್ಭದಲ್ಲಿ ಸಹಾಯ ನೀಡುತ್ತ ಬಂದಿರುವುದು ವಿಶೇಷವಾಗಿದೆ ಎಂದರು. ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನೆರೆ ಹಾವಳಿಗೆ ಒಳಗಾದ ಸಂತ್ರಸ್ತರಿಗೆ ಶ್ರೀಮಠದಿಂದ ಬಟ್ಟೆ, ದವಸ ಧಾನ್ಯ ಕೊಡುವುದರ ಮೂಲಕ ಶ್ರೀಮಠ ಸದಾ ಭಕ್ತರ ಮಠವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿ ಕೊರೊನಾ ವಾರಿಯರ್ಸ್‌ಗಳಿಗೆ ಆಹಾರ ಪ್ಯಾಕೆಟ್ ಗಳನ್ನು ಕೊಡಲಾಗುವುದು. ಗುಡಿಸಲು ವಾಸಿಗಳು, ನಿರ್ಗತಿಕರಿಗೆ 8ರಿಂದ 10 ದಿನಗಳ ಕಾಲ ಶ್ರೀಮಠದ ಭಕ್ತರು, ಯುವಕರ ಕಾರ್ಯ ಅತ್ಯುತ್ತಮವಾಗಿದೆ. ಸೋಂಕಿತರು ಶ್ರೀಮಠದ ಪ್ರಸಾದ ಸ್ವೀಕರಿಸಿ ಶೀಘ್ರ ಗುಣಮುಖರಾಗಲೆಂದು ಶ್ರೀಗಳು ಆರ್ಶೀವದಿಸಿದರು.
ತಹಶೀಲ್ದಾರ್ ಆಶಪ್ಪ ಪೂಜಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಬಿ.ಜಿ.ಜವಳಿ, ಕರಬಸಪ್ಪ ಹಂಚಿನಾಳ, ಡಾ.ರಾಜೇಶ, ಆರ್.ಬಿ.ಡಂಬಳಮಠ, ಡಾ.ಕುಮರಸ್ವಾಮಿ ಹಿರೇಮಠ, ಮಂಜುಳಾ ಸಜ್ಜನರ, ಬಾಬಣ್ಣ ಶಿವಶೆಟ್ಟಿ, ವೀರೇಶ ಸಜ್ಜನರ, ಅಜ್ಜಪ್ಪ ಲಿಂಬಿಕಾಯಿ, ಯು.ಸಿ. ಹಂಪಿಮಠ, ಕೈಲಾಸ ಹಿರೇಮಠ, ಡಾ.ಡಿ.ಸಿ.ಮಠ, ನಿಂಗಪ್ಪ ಕುಂಬಾರ, ಬಸವರಾಜ ಬಿಸನಹಳ್ಳಿ, ಡಾ.ಎ.ಬಿ.ಶಿವಶೆಟ್ಟಿ, ಹುಸೇನಬಾಷುಸಾಬ ಮುಲ್ಲಾ, ಮಂಜುನಾಥ ಇಟಗಿ, ಮಂಜು ಮುಧೋಳ, ಪ್ರಶಾಂತ ಗುಡದಪ್ಪನವರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.