Advertisement

ಲಾಂಗ್ ಹಿಡಿದು ರಗಡ್ ಲುಕ್ ನಲ್ಲಿ ಎಂಟ್ರಿ ಕೊಟ್ಟ ‘ತಲೈವಾ’ : ಅಣ್ಣಾತೆ ಮೋಷನ್ ಪೋಸ್ಟರ್ ಔಟ್

10:52 AM Sep 11, 2021 | Team Udayavani |

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಅಣ್ಣಾತೆ’ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಗಣೇಶ ಚತುರ್ಥಿ ಅಂಗವಾಗಿ ರಜನಿ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.

Advertisement

ಫಸ್ಟ್ ಲುಕ್ ನಲ್ಲಿ ವೈಟ್ ಅಂಡ್ ವೈಟ್ ಬಟ್ಟೆ ಧರಿಸಿ ‘ತಲೈವಾ’ ಟ್ರಡಿಷನಲ್ ಆಗಿ ಕಾಣಿಸಿದ್ದಾರೆ. ಇನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಮೋಷನ್ ಪೋಸ್ಟರ್ ನಲ್ಲಿ ರಗಡ್ ಲುಕ್ ನಲ್ಲಿ ಮಿಂಚಿದ್ದು, ಬೈಕ್ ಏರಿ.. ಲಾಂಗ್ ಹಿಡಿದಿದ್ದಾರೆ. ಇನ್ನು ಹಿನ್ನೆಲೆ ಸಂಗೀತ ಕೂಡ ಅದ್ದೂರಿಯಾಗಿದ್ದು ಅಭಿಮಾನಿಗಳಿಗೆ ಸಿನಿಮಾ ಮನರಂಜನೆಯ ಹಬ್ಬದೂಟವನ್ನು ಉಣಬಡಿಸುವುದರಲ್ಲಿ ಡೌಟ್ ಇಲ್ಲ ಎನ್ನುವಂತಿದೆ.

ದರ್ಬಾರ್ ಸಿನಿಮಾ ನಂತ್ರ ತೆರೆ ಕಾಣುತ್ತಿರುವ ರಜನಿ ಸಿನಿಮಾ ಇದಾಗಿದೆ. ಇನ್ನು ಅಣ್ಣಾತೆ ಸಿನಿಮಾ ಲಾಕ್ ಡೌನ್ ನಲ್ಲಿ ಮೂರ ಬಾರಿ ಚಿತ್ರೀಕರಣವನ್ನು ಮುಂದೂಡಿತ್ತು. ಅಲ್ಲದೆ ರಜನಿಕಾಂತ್ ಕೂಡ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಕಾರಣ ಶೂಟಿಂಗ್ ಕೊಂಚಮಟ್ಟಿಗೆ ತಡವಾಗಿತ್ತು.

ಸದ್ಯ ಎಲ್ಲಾ ಶೂಟಿಂಗ್ ಮುಗಿಸಿರುವ ಚಿತ್ರತಂಡ ರಿಲೀಸ್ ಗೆ ರೆಡಿಯಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಇದೇ ನವೆಂಬರ್ 4ಕ್ಕೆ ಅಣ್ಣಾತೆ ತೆರೆ ಕಾಣಲಿದೆ. ಇನ್ನು ಚಿತ್ರಕ್ಕೆ ಶಿವ ನಿರ್ದೇಶನ ಮಾಡುತ್ತಿದ್ದು, ಕಲಾನಿದಿ ಮರನ್ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ರಜನಿಕಾಂತ್ ಜೊತೆಯಲ್ಲಿ ಕೀರ್ತಿ ಸುರೇಶ್, ನಯನತಾರಾ, ಗೋಪಿ ಚಂದ್, ಜಾಕಿಶ್ರಾಫ್, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next