ಚಿಕ್ಕೋಡಿ: ಜೊಲ್ಲೆ ಉದ್ಯೋಗ ಸಮೂಹದ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಕರ್ನಾಟಕ ಮಹಾರಾಷ್ಟ್ರದಲ್ಲಿ ಸೇವೆ ಆರಂಭ ಮಾಡಿತ್ತು. ಬರುವ ದಿನಗಲ್ಲಿ ಗೋವಾ ರಾಜ್ಯದಲ್ಲಿ ಶಾಖೆಗಳನ್ನು ಆರಂಭ ಮಾಡಲಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಯಕ್ಸಂಬಾ 32 ನೆಯ ವಾರ್ಷಿಕ ಸರ್ವಸಾಧರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯ ಗ್ರಾಹಕರಿಗೆ ಅನುಕೂಲವಾಗಲು ಐದು ಶಾಖೆಗಳಿಗೆ ಎಟಿಎಂ ಸೌಲಭ್ಯ ಒದಗಿಸಲಾಗುತ್ತದೆ. ಸಂಸ್ಥೆಯಲ್ಲಿ 2500 ಜನ ಯುವಕರಿಗೆ ಉದ್ಯೋಗವಕಾಶ ನೀಡಲಾಗಿದೆ. ಸಿಬ್ಬಂದಿಗಳಿಗೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂಮಾತನಾಡಿದರುಸ್ಥೆಯುಬಂಕೋಳೆ ಮಾಿರ 45 ಕೋಟಿ ಠೇವು ಹೊಂದಿದೆ. ಜೊಲ್ಲೆ ಉದ್ಯೋಗ ಸಮೂಹ ಅಂಗಸಂಸ್ಥೆ ಪ್ರಗತಿ ಕಾಣುತ್ತಿದೆ. ಬರುವ ವರ್ಷದಲ್ಲಿ ಗೋವಾ ರಾಜ್ಯದಲ್ಲಿ ಶಾಖೆಗಳನ್ನು ಆರಂಭ ಮಾಡಿ ಗ್ರಾಹಕರಿಗೆ ಅನುಕೂಲ ಮಾಡಲಾಗುತ್ತದೆ.
ಜೊಲ್ಲೆ ಉದ್ಯೋಗ ಸಮೂಹದ ಅಂಗಸಂಸ್ಥೆಗಳಾದ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಿಟಿ 32 ನೆಯ ವಾರ್ಷಿಕೋತ್ಸವ. ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘದ 29 ನೆಯ. ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯ 28 ನೆಯ. ಜೊಲ್ಲೆ ಎಜ್ಯೂಕೇಶನ ಸೊಸಾಯಿಟಿ 27 ನೆಯ. ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ 15 ನೆಯ. ಲೋಕ ಕಲ್ಯಾಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ 11 ನೆಯ ವಾರ್ಷಿಕೋತ್ಸವ ನಡೆಯಿತು.
ಇದನ್ನೂ ಓದಿ : ಕಾಸರಗೋಡು : ಮೂರು ದಿನ ಆರೆಂಜ್ ಅಲರ್ಟ್
ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ. ಉಪಾಧ್ಯಕ್ಷ ಸಿದ್ರಾಮ ಗಡದೇ. ಜ್ಯೋತಿಪ್ರಸಾದ ಜೊಲ್ಲೆ. ಚಂದ್ರಕಾಂತ ಖೋತ. ಅಪ್ಪಾಸಾಹೇಬ ಜೊಲ್ಲೆ. ಎಲ್.ಬಿ.ಖೋತ. ಅನ್ವರ ದಾಡಿವಾಲೆ. ಪ್ರಧಾನ ವ್ಯವಸ್ಥಾಪಕ ರವೀಂದ್ರ ಚೌಗಲಾ.ಸಿಇಒ ವಿವೇಕಾನಂದ ಬಂಕೋಳೆ ಮುಂತಾದವರು ಇದ್ದರು.
ಬಸವಜ್ಯೋತಿ ಯುಥ ಪೌಂಡೇಶನ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು.ಬಿ.ಎ.ಗುರವ ನಿರೂಪಿಸಿದರು.