Advertisement
ನಿತ್ಯ ಎಷ್ಟು ಮಂದಿಗೆ ಊಟ?ದಿನಕ್ಕೆ ಒಟ್ಟು 20 25 ಸಾವಿರ ಜನರು ಮಂಜುನಾಥನ ಪ್ರಸಾದ ಭೋಜನ ಸವಿಯುತ್ತಾರೆ. ಒಂದೇ ದಿನ 65,000 ಜನ ಊಟ ಮಾಡಿರುವುದು ಇದುವರೆಗಿನ ದಾಖಲೆ!
ಇಲ್ಲಿ ಕೇವಲ 8 ಬಾಣಸಿಗರು ಈ ಪರಿ ಜನರಿಗೆ ಅಡುಗೆ ಮಾಡುತ್ತಾರೆಂಬುದು ಆಶ್ಚರ್ಯದ ವಿಷಯ! ಸ್ಟೀಮ್ ಬಾಯ್ಲರ್ ಬಳಕೆ ಇರುವುದರಿಂದ ಇಷ್ಟೇ ಜನ ಬಾಣಸಿಗರು ಸಾಕಾಗುತ್ತದೆ. ಕಳೆದ 20 ವರ್ಷಗಳಿಂದ ಸ್ಟೀಮ್ ಬಾಯ್ಲರ್ ಬಳಕೆಯಿದ್ದು, ಒಲೆ ಉರಿಸಿಲ್ಲ!
Related Articles
ಸರಾಸರಿ ಲೆಕ್ಕದಲ್ಲಿ, ಮಧ್ಯಾಹ್ನಕ್ಕೆ 20 ಕ್ವಿಂಟಾಲ್ ಅಕ್ಕಿ ಮತ್ತು ರಾತ್ರಿಗೆ 10 ಕ್ವಿಂಟಾಲ್ ಅಕ್ಕಿ, ಮಧ್ಯಾಹ್ನಕ್ಕೆ 15 ಕ್ವಿಂಟಾಲ್ ತರಕಾರಿ ಮತ್ತು ರಾತ್ರಿಗೆ 5 6 ಕ್ವಿಂಟಾಲ್ ತರಕಾರಿ ಬೇಕು.
Advertisement
ನೀರಿನ ಮರುಬಳಕೆಗೆ ಸುಯೇಜ್ ಪ್ಲ್ರಾನ್ಇಲ್ಲಿ ಕ್ವಿಂಟಾಲುಗಟ್ಟಲೆ ಅಕ್ಕಿ ತೊಳೆದ ನೀರನ್ನು ಸಂಗ್ರಹಿಸಿ ಶುದ್ಧಗೊಳಿಸಲಾಗುತ್ತದೆ. ಗಾರ್ಡನ್ನಿನ ಗಿಡಗಳಿಗೆ ಮತ್ತು ಬೇಸಿಗೆಯ ಕೊನೆಗೆ ಟಾಯ್ಲೆಟ್‌ಗಾಗಿ ಈ ನೀರನ್ನು ಬಳಸಲಾಗುತ್ತದೆ. ಸುಯೇಜ್ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ (ಖಖಕ) ಮೂಲಕ ಈ ನೀರಿನ ಮರುಬಳಕೆ ಸಾಧ್ಯವಾಗುತ್ತದೆ. ಅಡುಗೆ ತ್ಯಾಜ್ಯದಿಂದ ಎರೆಗೊಬ್ಬರ ತಯಾರಿಸಲಾಗುತ್ತದೆ. ಇದರ ಪ್ರಮಾಣವೇ ತಿಂಗಳಿಗೆ ಒಂದೂವರೆ ಟನ್! ಯಂತ್ರಗಳೇ ಸೂಪರ್‌ಮ್ಯಾನ್!
ಕ್ಲೀನಿಂಗ್ ಮಷಿನ್ ಈ ಅಡುಗೆ ಮನೆಯ ಮತ್ತೂಂದು ಆಕರ್ಷಣೆ. ಇಟಲಿಯ ನೀಲ್ ಫ್ಲೆಕ್ಸ್… ಕಂಪನಿಯಿಂದ ಫ್ಲೋರ್ ವಾಷ್ ಮಷಿನ್ ತರಿಸಲಾಗಿದೆ. 8 ಜನರ ಕೆಲಸ ಮಾಡುವ ಶಕ್ತಿ ಇದಕ್ಕಿದೆ. ಅಲ್ಲದೆ, ಧರ್ಮಸ್ಥಳದ ಅನ್ನಛತ್ರದಲ್ಲಿ ಶೇ. 30 ಕೆಲಸಗಳು ಯಂತ್ರಗಳಿಂದಲೇ ಆಗುತ್ತೆ. ಬೃಹತ್ ಗಾತ್ರದ ಬಾಯ್ಲರ್ ಸಹಾಯದಿಂದ ಗಂಟೆಗೆ 6,800 ಲೀಟರ್ ರಸಂ ತಯಾರಾಗುತ್ತೆ. ಗಂಟೆಗೆ 3,500 ತಟ್ಟೆ ವಾಷ್ ಮಾಡುವ ಡಿಷ್ ವಾಷರ್, ಗಂಟೆಗೆ 10 ಕ್ವಿಂಟಾಲ್ ಅಕ್ಕಿ ಕ್ಲೀನ್ ಮಾಡುವ ಯಂತ್ರ, ಗಂಟೆಗೆ 25 ಕ್ವಿಂಟಾಲ್ ತರಕಾರಿ ಕ್ಲೀನ್ ಮಾಡುವ ಯಂತ್ರ, 800 ತೆಂಗಿನಕಾಯಿ ತುರಿಯುವ ಯಂತ್ರಗಳು ಇಲ್ಲಿವೆ.
ಧರ್ಮಸ್ಥಳದ ಸಾರು ಸಖತ್ ಫೇಮಸ್ಸು. ಖಾರ ಮತ್ತು ಹುಳಿಯ ಹದವಾದ ಮಿಶ್ರಣ ಈ ರಸಂ. ಅನ್ನ, ರಸಂ, ಮಜ್ಜಿಗೆ ಮತ್ತು ಚಿಕ್ಕ ಬರ್ಫಿ ನಿತ್ಯದ ಊಟದಲ್ಲಿರುತ್ತದೆ. ನಿಮ್ಗೆ ಗೊತ್ತಾ?
ಶನಿವಾರ, ಭಾನುವಾರ ಮತ್ತು ಸೋಮವಾರ ಮುತ್ತುಗದ ಎಲೆಯಲ್ಲಿ ಊಟ ಬಡಿಸುವುದು ವಿಶೇಷ.
ಶ್ರೀ ವೀರೇಂದ್ರ ಹೆಗ್ಗಡೆಯವರು, ಹಷೇìಂದ್ರ ಕುಮಾರರು ಅನ್ನಪೂರ್ಣ ಛತ್ರಕ್ಕೆ ವಾರಕ್ಕೊಮ್ಮೆ ಭೇಟಿ ನೀಡಿ ಮಾರ್ಗದರ್ಶನ ಮಾಡುತ್ತಾರೆ.
ಹೇಮಾವತಿ ಹೆಗ್ಗಡೆ, ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅವರಿಗೆ ಛತ್ರಕ್ಕೆ ಬಂದಾಗೆಲ್ಲ ಊಟ ಬಡಿಸುವ ಪರಿಪಾಠವಿದೆ. ಸಂಖ್ಯಾ ಸೋಜಿಗ
7 ಗಂಟೆಗೆ ಇಷ್ಟು ಕ್ವಿಂಟಾಲ್ ಅನ್ನ ಆಗುತ್ತೆ!
8 ಕೇವಲ ಇಷ್ಟು ಬಾಣಸಿಗರಿಂದ ಅಡುಗೆ ತಯಾರಿ
9 ನಿಮಿಷದಲ್ಲಿ ಭಕ್ತಾದಿಗಳ ಊಟ ಮುಕ್ತಾಯ
2000 ಮಂದಿಗೆ ಏಕಕಾಲದಲ್ಲಿ ಅನ್ನಸಂತರ್ಪಣೆ
230 ಅನ್ನಛತ್ರದ ಹಿಂದಿನ ಒಟ್ಟು ಕೈಗಳು
600 ಲೀಟರ್ ನಿತ್ಯ ತಯಾರಾಗುವ ಮಜ್ಜಿಗೆ
200 ಕೆ.ಜಿ. ಬಳಕೆ ಆಗುವ ಉಪ್ಪು
250 ಕೆ.ಜಿ. ತೊಗರಿ ಬೇಳೆ
30 ಕೆ.ಜಿ. ಹುಣಸೆ
70,00,00,000 ಕಳೆದವರ್ಷ ಇಷ್ಟು ಮಂದಿಯ ಹಸಿವು ತಣಿಸಿದ್ದಾನೆ, ಮಂಜುನಾಥ! ಅಡುಗೆ ಸಾಹಸ ಹೇಗಿರುತ್ತೆ?
ಬೃಹತ್ ಗಾತ್ರದ ಬಾಯ್ಲರ್ ಸಹಾಯದಿಂದ ಗಂಟೆಗೆ 6800 ಲೀ. ರಸಂ, ಸಾಂಬಾರು, ಕೂಟು ಪದಾರ್ಥ ತಯಾರಿಸಲಾಗುತ್ತದೆ. ಗಂಟೆಗೆ 7 ಕ್ವಿಂಟಾಲ್ ಅನ್ನ ಮಾಡಬಹುದು. ಜನರ ಸಂಖ್ಯೆ ಹೆಚ್ಚಾಗಿ, ಅಡುಗೆ ಕಡಿಮೆ ಬಿದ್ದರೆ ತಕ್ಷಣ ಅಡುಗೆ ತಯಾರಿಸುವ ಸೌಲಭ್ಯವಿದೆ. ಅಡುಗೆಗೆ ದಿನಂಪ್ರತಿ ಬಳಕೆಯಾಗುವ ನೀರು, 1.50 2 ಲಕ್ಷ ಲೀಟರ್ ನೀರು. ಹಸಿದು ಬಂದವನಿಗೆ ಅನ್ನ ಸಿಗಬೇಕು ಎಂಬ ಕ್ಷೇತ್ರದ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಅನ್ನದಾನ ನಡೆಯುತ್ತಿದೆ.
ಸುಬ್ರಹ್ಮಣ್ಯ ಪ್ರಸಾದ್, ಅನ್ನಛತ್ರದ ಮ್ಯಾನೇಜರ್ ಗಣಪತಿ ದಿವಾಣ
ಚಿತ್ರಗಳು ಶರತ್ ಕುಮಾರ್