Advertisement

ಅಣ್ಣಾಡಿಎಂಕೆ ಶೀಘ್ರ ಎನ್‌ಡಿಎ ಪಾಲುದಾರ

06:50 AM Aug 28, 2017 | Team Udayavani |

ನವದೆಹಲಿ: ತಮಿಳುನಾಡಿನ ಅಣ್ಣಾಡಿಎಂಕೆ ಸದ್ಯವೇ ಎನ್‌ಡಿಎ ಭಾಗವಾಗಲಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಹೆಚ್ಚು ಕಡಿಮೆ ಎಲ್ಲವೂ ಮುಗಿದಿದ್ದು ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ ಎಂದು ದಕ್ಷಿಣ ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಾಯಕ ಹೇಳಿದ್ದಾರೆ. 

Advertisement

ಮೋದಿ ಸರ್ಕಾರದಲ್ಲಿ ಅಣ್ಣಾಡಿಎಂಕೆ ಪಾಲುದಾರನಾಗಲಿದೆ. ಕೆಲವರು ಮೋದಿ ಸಂಪುಟದಲ್ಲಿ ಸಚಿವರಾಗಲಿದ್ದಾರೆ ಎಂದಿದ್ದಾರೆ. ಈ ನಡುವೆ, ಭಾನುವಾರ ರಾಜ್ಯಪಾಲರನ್ನು ಭೇಟಿಯಾಗಿರುವ ಡಿಎಂಕೆ, ಸಿಎಂ ಪಳನಿಸ್ವಾಮಿ ಅವರಿಗೆ ವಿಶ್ವಾಸಮತ ಸಾಬೀತುಪಡಿಸು ವಂತೆ ಸೂಚಿಸಿ ಎಂದು ಒತ್ತಾಯಿಸಿದೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಟಿಟಿವಿ ದಿನಕರನ್‌ ಅವರು ಸೇಲಂ ಜಿಲ್ಲಾ ಕಾರ್ಯದರ್ಶಿ ಸ್ಥಾನದಿಂದ ಮುಖ್ಯಮಂತ್ರಿ ಪಳನಿಸ್ವಾಮಿಯನ್ನು ವಜಾ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next