Advertisement

ಆಂಧ್ರದಲ್ಲಿ ಅಣ್ಣಾ ಕ್ಯಾಂಟೀನ್‌

06:00 AM Jul 12, 2018 | Team Udayavani |

ಅಮರಾವತಿ: ಕರ್ನಾ ಟಕದ “ಇಂದಿರಾ ಕ್ಯಾಂಟೀನ್‌,’ “ಅಪ್ಪಾಜಿ ಕ್ಯಾಂಟೀನ್‌’, ತಮಿಳುನಾಡಿನ “ಅಮ್ಮಾ ಕ್ಯಾಂಟೀನ್‌’ ಮಾದರಿಯಲ್ಲೇ ಆಂಧ್ರ ಪ್ರದೇಶದಲ್ಲೂ “ಅಣ್ಣಾ ಕ್ಯಾಂಟೀನ್‌’ ಜಾರಿಗೆ ಬಂದಿದೆ. ಮೊದಲ ಹಂತದಲ್ಲಿ ರಾಜ್ಯಾ ದ್ಯಂತ 60 ಅಣ್ಣಾ ಕ್ಯಾಂಟೀನ್‌ ಗಳನ್ನು ಬುಧವಾರ ಆರಂಭಿಸ ಲಾಗಿದ್ದು, ವಿಜಯವಾಡದಲ್ಲಿ ಕ್ಯಾಂಟೀನ್‌ಗೆ ಸಿಎಂ ಚಂದ್ರಬಾಬು ನಾಯ್ಡು ಚಾಲನೆ ನೀಡಿದ್ದಾರೆ. 

Advertisement

ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಮತ್ತು ರಾತ್ರಿಯ ಊಟ ತಲಾ 5 ರೂ.ಗಳಿಗೆ ಸಿಗಲಿವೆ. 2016ರ ಮಾರ್ಚ್‌ ನಲ್ಲೇ ತೆಲುಗುದೇಶಂ ಪಕ್ಷ (ಟಿಡಿಪಿ)ದ ಸ್ಥಾಪಕ ಎನ್‌.ಟಿ. ರಾಮರಾವ್‌ ಅವರ ಹೆಸರಲ್ಲಿ ಪ್ರಾಯೋಗಿಕವಾಗಿ ಮೊದಲ ಕ್ಯಾಂಟೀನ್‌ ಆರಂಭಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next