Advertisement

ನಾಡಿನ ಉತ್ಸವವಾಗಿ ಜರಗಿದ ಅಣ್ಣ ತಮ್ಮ ಜೋಡುಕರೆ ಕಂಬಳ

01:58 AM Feb 25, 2020 | Team Udayavani |

ಕುಂಬಳೆ: ಕೇರಳ ರಾಜ್ಯದ ಏಕೈಕ ಅಣ್ಣ ತಮ್ಮ ಜೋಡುಕರೆ ಕಂಬಳವು ಪೈವಳಿಕೆ ಬೋಳಂಗಳದಲ್ಲಿ ದ್ವಿತೀಯ ಬಾರಿಗೆ ಜಾತಿ ಮತ ಬೇಧವಿಲ್ಲದೆ ಸೌಹಾರ್ದಯುತವಾಗಿ ವೈಭವದಿಂದ ನಾಡಿನ ಉತ್ಸವವಾಗಿ ನಡೆಯಿತು.

Advertisement

ಸಮಾರೋಪ ಸಮಾರಂಭದಲ್ಲಿ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿ, ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಜನಪದ ಕ್ರೀಡೆಗಳನ್ನು ಉಳಿಸುವ ಮಹತ್ವದ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ. ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದರು.

ಕಂಬಳ ಸಮಿತಿ ಅಧ್ಯಕ್ಷ ಡಿ.ಭಾಸ್ಕರ ರೈ ಮಂಜಲೊ¤àಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೊಳ್ಳಾರ್‌ ಈಶ್ವರ ಪೂಜಾರಿ, ಕೆ.ಎಚ್‌.ಖಾದರ್‌ , ಬಾಯಿಕಟ್ಟೆ ಅಯ್ಯಪ್ಪ ಭಜನಾ ಮಂದಿರದ ಗೌರವಾಧ್ಯಕ್ಷ ಶ್ರೀರಾಮ ಮೂಡಿತ್ತಾಯ, ತಂತ್ರಿವರ್ಯ ವಾಸುದೇವ ನಲ್ಲೂರಾಯ , ಚಿತ್ತರಂಜನ್‌,ಹರ್ಷಾದ್‌, ರಾಮಕೃಷ್ಣ ಶೆಟ್ಟಿ ಕಡಂಬಾರ್‌, ಬಾಬು ಪೂಜಾರಿ ಬಾಡೂರು, ಸಂಜೀವ ಶೆಟ್ಟಿ, ಶ್ರೀಧರ ಹೊಳ್ಳ, ಪಿ.ಆರ್‌.ಶೆಟ್ಟಿ ಪೊಯೆÂಲು, ರಂಗತ್ರೆ„ ಅರಸರು , ಕೌಡೂರು ಬೀಡು ಮಾರಪ್ಪ ಶೆಟ್ಟಿ, ಅಶ್ವಥ್‌ ಪೂಜಾರಿ ಲಾಲ್‌ಭಾಗ್‌, ಹರೀಶ್‌ ಶೆಟ್ಟಿ ಕಡಂಬಾರು, ಅಜಿತ್‌.ಎಂ.ಸಿ.ಲಾಲ್‌ಭಾಗ್‌ ಉಪಸ್ಥಿತರಿದ್ದರು. ಕಂಬಳದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೆ„ದ ಅಳದಂಗಡಿ ರವಿ ಕುಮಾರ್‌, ಸಂಕಪ್ಪ ರೈ ಪಟ್ಟತ್ತಮೊಗರು ಕೆಳಗಿನ ಮನೆ, ಹೊಸಮನೆ ಕೃಷ್ಣ ಶೆಟ್ಟಿ, ಮಹಾಬಲ ಶೆಟ್ಟಿ ಗುಂಡಿಬೆ„ಲು, ರಾಜೇಶ ಮಾರು ಸುಣ್ಣಾಡ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ¿ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ.ಎಂ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next