Advertisement

ಮಣಿಪಾಲ್‌ ಆಸ್ಪತ್ರೆಯಿಂದ ಅಂಕುರ್‌ ಕ್ಲಿನಿಕ್‌

06:27 AM Mar 09, 2019 | Team Udayavani |

ಬೆಂಗಳೂರು: ಮಣಿಪಾಲ್‌ ಆಸ್ಪತ್ರೆಯ ಬಂಜೆತನ ಸಂಬಂಧಿ ಚಿಕಿತ್ಸೆಯ “ಮಣಿಪಾಲ್‌ ಫ‌ರ್ಟಿಲಿಟಿ’ ಮತ್ತು ಡಾ.ಬೀನಾ ವಾಸನ್‌ ಪ್ರತಿಷ್ಠಾನದ ಸಹಯೋಗದಲ್ಲಿ ಕೈಗೆಟುಕುವ ಬೆಲೆಯಲ್ಲಿ ಫ‌ರ್ಟಿಲಿಟಿ ಸೇವೆ ನೀಡಲು ಅಂಕುರ್‌ ಕ್ಲಿನಿಕ್‌ ಆರಂಭಿಸಲಾಗಿದೆ.

Advertisement

ಫ‌ರ್ಟಿಲಿಟಿ ಕೊರತೆ ಬಗ್ಗೆ ಚಿಕಿತ್ಸೆ ಪಡೆಯಲು ಬಯಸುವ ಆರ್ಥಿಕವಾಗಿ ದುರ್ಬಲರಾದ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಈ ಕ್ಲಿನಿಕ್‌ ಆರಂಭಿಸಲಾಗಿದೆ. ಫ‌ರ್ಟಿಲಿಟಿ ಕೊರತೆಯ ಚಿಕಿತ್ಸೆಯ ಒಂದು ಭಾಗವಾದ ಐವಿಎಫ್ ಚಿಕಿತ್ಸೆಗೆ 2.5 ಲಕ್ಷ ರೂ. ವೆಚ್ಚವಾಗುತ್ತಿತ್ತು. ಅಂಕುರ್‌ ಕ್ಲಿನಿಕ್‌ ಸೇವೆಯಲ್ಲಿ ಬಡಜನರಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭಿಸಲಿದೆ.

ಮಾಸಿಕ 15 ಸಾವಿರ ರೂ.ಗಳಿಗೂ ಕಡಿಮೆ ಆದಾಯ ಹೊಂದಿರುವ ದಂಪತಿ ತಮ್ಮ ಹೆಸರನ್ನು ಅಂಕುರ್‌ ಕ್ಲಿನಿಕ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಅಂಕುರ್‌ ಕ್ಲಿನಿಕ್‌ನ ಸಮಗ್ರ ಫ‌ರ್ಟಿಲಿಟಿ ಸೇವೆಗಳನ್ನು ಪುರುಷರು ಮತ್ತು ಮಹಿಳೆಯರು ಪಡೆದುಕೊಳ್ಳಬಹುದು. ಸಲಹೆ, ರಕ್ತಪರೀಕ್ಷೆ, ಅಲ್ಟ್ರಾಸೌಂಡ್‌ ಶಸ್ತ್ರಚಿಕಿತ್ಸೆ ಮುಂತಾದ ಸೇವೆಗಳು ಶೇ.50ರಷ್ಟು ರಿಯಾಯಿತಿಯಲ್ಲಿ ದೊರೆಯಲಿವೆ.

ಈ ಬಗ್ಗೆ ಮಾತನಾಡಿದ ಮಣಿಪಾಲ್‌ ಫ‌ರ್ಟಿಲಿಟಿಯ ಸಿಇಒ ಮತ್ತು ವೈದ್ಯಕೀಯ ನಿರ್ದೇಶಕ ಡಾ.ವಾಸನ್‌ ಎಸ್‌.ಎಸ್‌, ಇತ್ತೀಚಿನ ದಿನಗಳಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಫ‌ಲವತ್ತತೆ ತೊಂದರೆ ಹೆಚ್ಚಿದೆ. ಆಧುನಿಕ ಜೀವನಶೈಲಿಯು ಫ‌ಲವತ್ತತೆ ಕೊರತೆಗೆ ಪ್ರಮುಖ ಕಾರಣವಾಗಿದೆ. ಬಡ ವರ್ಗದವರಲ್ಲಿ ಕ್ಷಯದಂತಹ ಸೋಂಕುಗಳು, ಅತಿಯಾದ ಧೂಮಪಾನ, ಮದ್ಯಪಾನ, ಮಾಲಿನ್ಯ ವಾತಾವರಣ, ಅಪಾಯಕಾರಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವುದರಿಂದ ಈ ತೊಂದರೆಗೆ ಕಾರಣವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next