Advertisement
ಪಟ್ಟಣದಲ್ಲಂತು ತಾಲೂಕಿನ ಜನತೆ ಯಾವುದಕ್ಕೂ ಹೆದರದೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಶನಿವಾರವಂತೂ ಭಾರಿ ಸಂಖ್ಯೆಯಲ್ಲಿ ಜನರು ರಸ್ತೆಗಿಳಿದಿದ್ದರಿಂದ ಪಟ್ಟಣದಲ್ಲಿ ಜನದಟ್ಟಣೆ ಆಗಿರುವುದು ಕಂಡು ಬಂದಿತು. ಇಲ್ಲಿಯವರೆಗೆ ಅಂಕೋಲಾ ತಾಲೂಕಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಅಷ್ಟೇನಿರಲಿಲ್ಲ. ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಾದ್ಯಾಂತ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿಯು ಪ್ರಕರಣ ಕಂಡುಬರುತ್ತಿದೆ. ಆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ತಾಲೂಕಿನ ಜನ ರಾಜಧಾನಿ ಬೆಂಗಳೂರಿನಲ್ಲಿ ಕೆಲಸಕ್ಕೆಂದು ಹೋದವರು ಮರಳಿ ಮನೆ ಸೇರುತ್ತಿದ್ದಾರೆ. ಅಂತವರಲ್ಲಿ ಕೆಲವರು ಮಾತ್ರ ಆರೋಗ್ಯ ಇಲಾಖೆಗೆ ತಮ್ಮ ಮಾಹಿತಿ ನೀಡಿ ಬರುತ್ತಿದ್ದು, ಇನ್ನೂ ಕೆಲವರು ಮಾಹಿತಿ ನೀಡದೆ ಮನೆ ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಜಧಾನಿಯಿಂದ ವಾಪಸ್ಸಾದ ಕೆಲವರಲ್ಲಿ ಸೋಂಕು ಕಂಡು ಬಂದಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದೆ.
Advertisement
ಅಂಕೋಲಾ ಜನರಿಗೆ ಕೋವಿಡ್ ಭಯವಿಲ್ಲ!
12:35 PM Jul 19, 2020 | Suhan S |
Advertisement
Udayavani is now on Telegram. Click here to join our channel and stay updated with the latest news.