Advertisement

Ankola ಗುಡ್ಡ ಕುಸಿತ ಪ್ರಕರಣ: ಮತ್ತೆರಡು ಮೃತದೇಹ ಪತ್ತೆ: ಆರಕ್ಕೆರಿದ ಸಾವಿನ ಸಂಖ್ಯೆ

12:07 PM Jul 18, 2024 | Team Udayavani |

ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಕಣ್ಮರೆಯಾಗಿದ್ದ ಬಾಲಕಿ ಅವಂತಿಕಾ ಮೃತದೇಹ ಹಾಗೂ ಇನ್ನೊಂದು ಪುರುಷನ ಮೃತದೇಹ ಪತ್ತೆಯಾಗಿದೆ ಎಂದು ವರದಿ ತಿಳಿಸಿದ್ದು, ಸಾವಿನ ಸಂಖ್ಯೆ ಇದೀಗ ಒಟ್ಟು ಆರಕ್ಕೆರಿದೆ.

Advertisement

ಕಳೆದೆರಡು ದಿನಗಳ ಹಿಂದೆ ಒಂದೇ ಕುಟುಂಬದ ಐವರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಇದೀಗ ಕುಟುಂಬದ ಬಾಲಕಿ ಅವಂತಿಕಾ ಮೃತದೇಹ ಕುಮಟಾ ತಾಲೂಕಿನ ಗಂಗೆ ಕೊಳ್ಳದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಇನ್ನೊರ್ವ ಪುರುಷನ ಮೃತದೇಹ ಮಂಜುಗುಣಿಯ ಗಂಗಾವಳಿ ನದಿ ತೀರದಲ್ಲಿ ದೊರೆತಿದೆ.

ಈ ಹಿಂದೆ ಲಕ್ಷ್ಮಣ ನಾಯ್ಕ, ಹೆಂಡತಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮತ್ತು ಚಾಲಕ ಸಿನವಣ್ಣನ್ ಸೇರಿ ನಾಲ್ಕು ಮೃತದೇಹ ಪತ್ತೆಯಾಗಿತ್ತು.

Advertisement

Advertisement

Udayavani is now on Telegram. Click here to join our channel and stay updated with the latest news.

Next