ಅಂಕೋಲಾ: ಹಿಂಗಾರು ಬೆಳೆಗೆ ಬರ ಮುಂಗಾರು ಬೆಳೆಗೆ ನೆರೆ ಸಂಕಷ್ಟ ಇದರಿಂದಾಗಿ ರೈತರ ಬೆಳೆ ನೀರಿನಲ್ಲಿ ಕೊಚ್ಚಿ ಹೊಗಿ ಬದುಕಿನಲ್ಲಿ ಕತ್ತಲಾವರಿಸಿದೆ. ತಾಲೂಕಿನಲ್ಲಿ ಸಾವಿರಾರು ಎಕರೆ ಕೃಷಿ ಬೆಳೆ ಹಾನಿಯಾಗಿದೆ.
Advertisement
ಕಳೆದೊಂದು ವಾರದಿಂದ ಅಬ್ಬರಿಸಿದ ಆಶ್ಲೇಷಾ ಮಳೆಗೆ ಜೀವನದಿ ಗಂಗಾವಳಿ ತಟದ ಪ್ರದೇಶ ವಾಸಿಗಳ ಬದುಕು ಹೈರಾಣಾಗಿದೆ. ನರೆ ಇಳಿದಿದೆ. ಆದರೆ ಎಲ್ಲವನ್ನು ತನ್ನೊಡಲಿಗೆ ಸೇರಿಸಿಕೊಂಡಿದೆ. ಹೊಲಗದ್ದೆಯಲ್ಲಿ ಬತ್ತದ ಸಸಿ ಕಾಣುವಲ್ಲಿ ರಾಡಿ ಮಣ್ಣಿನ ರಾಶಿಯೆ ಕಾಣುತ್ತಿದೆ. ಇದರಿಂದಾಗಿ ತಾಲೂಕಿನಲ್ಲಿ ಸುಮಾರು ಶೇ.60 ರಷ್ಟು ಕೃಷಿ ಬೆಳೆ ನಾಶವಾಗಿ ಕೊಟ್ಯಂತರ ರೂ. ಹಾನಿ ಉಂಟಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದಿದೆ.
Related Articles
Advertisement
ಮನಕಲುಕುವ ಸ್ಥಿತಿ: ನೆರೆ ಪ್ರದೇಶಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಕರುಣಾಜನಕ ಸ್ಥಿತಿ ಎಂಥವರನ್ನು ಮನಕಲುಕಿಸುವಂತೆ ಮಾಡಿತ್ತು. ಬಿದ್ದ ಮನೆಯ ಆವಾರದಲ್ಲಿ ಗೂಡಿನ ಅಂಚಿನಲ್ಲೆ ಮುದುಡಿಕೊಂಡು, ಪ್ಲಾಸ್ಟಿಕ್ ಹೊದಿಕೆಯಲ್ಲೆ ಆಶ್ರಯ ಪಡೆದಿದ್ದು ಮಮ್ಮಲಮರಗುವಂತೆ ಮಾಡುತ್ತದೆ.
ಈ ನೆರೆ ಕರುಳ ಬಳ್ಳಿಯ ಸಂಬಂಧಕ್ಕೂ ಭಂಗ ತಂದಿದೆ. ತಂದೆ- ತಾಯಿ ಒಂದೆಡೆ, ಮಕ್ಕಳು ಯಾರೋ ಸಂಬಂಧಿಕರ ಮನೆಯಲ್ಲಿ ಇರುವುದು ಕಂಡು ಬಂದಿದೆ.