ಅಂಕೋಲಾ: ಕಾರವಾರ-ಅಂಕೋಲಾ ಕ್ಷೇತ್ರದ ಅಭಿವೃದ್ಧಿಗೆ 400 ಕೋಟಿ ರೂ. ಅನುದಾನ ತಂದಿದ್ದೇನೆ. ಆದರೆ ಅದು ನನಗೆ ಸಮಾಧಾನಿಸಿಲ್ಲ. ನಮ್ಮ ಕ್ಷೇತ್ರದ ಯುವಜನಾಂಗಕ್ಕೆ ಉದ್ಯೋಗ ದೊರೆತು ಶಸಕ್ತರಾದರೆ ಅಂದು ಈ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಹೊಂದುತ್ತದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಪಟ್ಟಣದ ಜೈಹಿಂದ್ ಮೈದಾನದಲ್ಲಿ ನಡೆದ ನಾಲ್ಕನೇ ವರ್ಷದ ಅಂಕೋಲಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿಗಳ ಬಳಿ ಕ್ಷೇತ್ರದ ಸಮಸ್ಯೆ ಮುಂದಿಟ್ಟು ನೆರೆಹಾವಳಿಯಿಂದಾದ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ
ಪ್ರಯತ್ನಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು. ಅಂಕೋಲೆಯ ಒಳ್ಳೆಯ ಮನಸ್ಸುಗಳಿಂದ ಸಾಂಸ್ಕೃತಿಕನವೋಲ್ಲಾಸದ ಜೊತೆಗೆ ಅಭಿವೃದ್ಧಿಯ ಚಿಂತನೆಗೆ ವೇದಿಕೆಯಾಗಿ ನಿಂತ ಅಂಕೋಲಾ ಉತ್ಸವವು ಹೊಸದೊಂದು ಭಾಷ್ಯ ಬರೆದಿದೆ ಎಂದರು.
ತಾಪಂ ಅಧ್ಯಕ್ಷೆ ಸುಜಾತಾ ಗಾಂವ್ಕರ್ ಮಾತನಾಡಿ, ಉತ್ಸವದಲ್ಲಿ ಜಾತಿ ಧರ್ಮ ಬಿಟ್ಟು ಎಲ್ಲರೂ ಒಂದಾಗಿ ಅಭಿವೃದ್ಧಿಪರ ಚರ್ಚೆ ಮತ್ತು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಲಿ ಎಂದರು.
ಉಮರ್ ಶೇಖ್ ಸ್ಮರಣಾರ್ಥ ನಿರ್ಮಿಸಿದ ವೇದಿಕೆಯನ್ನು ಹುಬ್ಬಳ್ಳಿಯ ಉದ್ಯಮಿ ಇಂಮಿ¤ಯಾಜ್ ಉಮರ್ ಶೇಖ್ ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಜಿಪಂ ಸದಸ್ಯರಾದ ಜಗದೀಶ್ ನಾಯಕ, ಹಿರಿಯ ನ್ಯಾಯವಾದಿ ಸುಭಾಷ ನಾರ್ವೆàಕರ, ಉದ್ಯಮಿ ಸಾಯಿ ಕೆ. ಗಾಂವಕರ, ಪಪಂ ಮಾಜಿ ಅಧ್ಯಕ್ಷ ಅರುಣ್ ನಾಡಕರ್ಣಿ, ನಾಟಿ ವೈದ್ಯ ಹನುಮಂತ ಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಅರ್ಬನ್ ಬ್ಯಾಂಕ್ ನಿರ್ದೇಶಕ ಗೋವಿಂದ್ರಾಯ ನಾಯಕ ಮಾತನಾಡಿದರು.
ಸಾಧಕರಾದ ಇಮ್ತಿಯಾಜ್ ಖಾನ್, ನಾಗರಾಜ್ ನಾಯ್ಕ, ರವೀಂದ್ರ ಕೇಣಿ, ಅಶೋಕ ಗೌಡ ,ವಿಷ್ಣು ಗೌಡ, ಆಶಾ ನಾಯ್ಕ, ಗುರುಪ್ರಸಾದ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪ್ರಾಯೋಜಕ ಉದ್ದಿಮೆದಾರ ಇಮ್ತಿಯಾಜ್ ಶೇಖ್, ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ, ಕುಮಟಾದ ಡಯಟ್‌ನ ಉಪನ್ಯಾಸಕ ನಾಗರಾಜ್ ನಾಯಕ, ಕಲಾಕಾರರಾದ ವಿಷ್ಣು ಗೌಡ, ಅಶೋಕ ಗೌಡ ಅಂಬಾರಕೊಡ್ಲ, ಶಾಸಕರ ಆಪ್ತ ಕಾರ್ಯದರ್ಶಿಗಳಾದ ಗುರುಪ್ರಸಾದ ನಾಯ್ಕ, ಆಶಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ವಿಠಲದಾಸ ಕಾಮತ ಆಶಯ ನುಡಿಯಾಡಿದರು. ಸಂಘಟಕ ಕೆ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಸ್ಕರ ನಾರ್ವೇಕರ ಸ್ವಾಗತಿಸಿದರು. ರಾಜೇಶ ನಾಯಕ ನಿರೂಪಿಸಿದರು. ಜಗದಿಧೀಶ ನಾಯಕ ವಂದಿಸಿದರು.