Advertisement
ವೃತ್ತಿಯಲ್ಲಿ ಪಿಡಿಒ ಆಗಿರುವ ವಿಟ್ಠಲ ವಾಸು ಬಾಂದಿ ಇವರು ಈ ಕುರಿತು ದೂರು ನೀಡಿದ್ದು ಡಿಸೆಂಬರ್ 8 ಮಧ್ಯರಾತ್ರಿಯಿಂದ ನಸುಕಿನ 2.30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯವರು ಮಲಗಿರುವಾಗ, ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು, ದೇವರ ಕೋಣೆಯಲ್ಲಿದ್ದ ಅಂದಾಜು 1 ಲಕ್ಷ 30 ಸಾವಿರ ರೂ. ಬೆಲೆಬಾಳುವ ಹಿತ್ತಾಳೆ ಲೋಹದ ದೇವರ 47 ಮೂರ್ತಿಗಳು, 5 ಕಪಿಲ್ ಕಲ್ಲುಗುಂಡುಗಳು ಹಾಗೂ ವಿಟ್ಠಲ ಬಾಂದಿ ಅವರ ಹೆಂಡತಿಯ ಹಳೆಯ ನೊಕಿಯಾ ಮೊಬೈಲನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. Advertisement
Ankola; ಮನೆ ಮಂದಿ ಮಲಗಿರುವಾಗಲೇ ಕನ್ನ: ದೇವರ ಮೂರ್ತಿಗಳನ್ನೇ ಕದ್ದೊಯ್ದರು
11:04 PM Dec 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.