Advertisement
ತಿಂಡಿ ಕೊಡಿಸುತ್ತೇನೆ ಎಂದು ಪುಸಲಾಯಿಸಿ, ತೋಟಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹೆಗ್ಗಾರದ ಕೃಷ್ಣ ಶಿವರಾಮ ಭಟ( 72) ಎನ್ನುವವನ ಮೇಲೆ ಪ್ರಕರಣ ದಾಖಲಾಗಿದ್ದು ಆರೋಪಿತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮೇ 10ರಂದು ಆರೋಪಿ ಕೃಷ್ಣ ಶಿವರಾಮ ಭಟ ಈತ 10 ವರ್ಷದ ಬಾಲಕಿಯನ್ನು ತನ್ನ ತೋಟಕ್ಕೆ ಕರೆದು ಮೈ ಕೈ ಮುಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸ್ ನೀರಿಕ್ಷಕ ಶ್ರೀಕಾಂತ ತೋಟಗಿ ಅವರ ಮಾರ್ಗದರ್ಶನದಲ್ಲಿ ಪಿ ಎಸ್ ಐ ಸುಹಾಸ ಆರ್ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ