Advertisement

Ankola: ಉಪ್ಪಿನ ಸತ್ಯಾಗ್ರಹದ 93 ನೇ ವರ್ಷದ ನೆನಪು; ಬಾಗಿನ ಅರ್ಪಣೆ

10:54 PM Apr 13, 2023 | Team Udayavani |

ಅಂಕೋಲಾ : ಯುವ ಪೀಳಿಗೆಯವರಿಗೆ ನಮ್ಮ ಹಿಂದಿನ ಇತಿಹಾಸ ಅದು ನಾವು ಮಾಡಿದ ಬಹುದೊಡ್ಡ ದ್ರೋಹವಾಗುತ್ತದೆ. ಅಂದು ಬ್ರಿಟಿಷರು ಉಪ್ಪಿಗೆ ವಿಧಿಸಿದ ಕರವನ್ನು ನಿರಾಕರಿಸಿ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಹಮ್ಮಿಕೊಂಡು ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಈಗ ಇದರ 93 ನೇ ಹೊಸ ಆಚರಣೆಯ ನಿಮಿತ್ತ ಪೂಜಗೇರಿ ಹಳ್ಳಕ್ಕೆ ಬಾಗಿನ ಅರ್ಪಿಸಿರುವುದು ನನ್ನ ಸೌಭಾಗ್ಯ ಎಂದು ಹಿರಿಯ ಸಾಹಿತಿ ಡಾ. ರಾಮಕೃಷ್ಣ ಗುಂದಿ ಹೇಳಿದರು.

Advertisement

ಕಡಲು ಪ್ರಕಾಶನ ಮಂಜಗುಣಿ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡ ಉಪ್ಪಿನ ಸತ್ಯಾಗ್ರಹದ ೯೩ನೇ ವರ್ಷದ ನೆನಪಿಗಾಗಿ ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆರೆ-ಕಟ್ಟೆಗಳು ತುಂಬಿದಾಗ ನದಿಗಳು ತುಂಬಿ ಹರಿಯುವಾಗ ಅವುಗಳನ್ನು ಹೆಣ್ಣಿನ ರೂಪದಲ್ಲಿ ನೋಡಿ ಬಾಗೀನ ಅರ್ಪಿಸುವ ಸಂಪ್ರದಾಯ ನಮ್ಮಲ್ಲಿದೆ. ಅಂದು ಇದೇ ಹಳ್ಳದ ನೀರನ್ನು ತೆಗೆದುಕೊಂಡು ಹೋಗಿ ಉಪ್ಪನ್ನು ಸಿದ್ಧಪಡಿಸಿದ್ದರು. ಹೀಗಾಗಿ ಈ ಪೂಜಗೇರಿ ಹಳ್ಳಕ್ಕೆ ಬಾಗಿನ ಅರ್ಪಿಸಿರುವುದು ಅರ್ಥಪೂರ್ಣವಾದದ್ದು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ , ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ , ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ , ವಕೀಲ ಉಮೇಶ ನಾಯ್ಕ, ಜಿಲ್ಲಾ ನಾಗರಿಕ ವೇದಿಕೆ ಅಧ್ಯಕ್ಷ ಶ್ರೀಪಾದ ಟಿ. ನಾಯ್ಕ ಮಾತನಾಡಿದರು. ವರದಿಗಾರ ವಿಲಾಸ ನಾಯಕ, ನಾಗರಾಜ ಶೆಟ್ಟಿ, ಪ್ರಮುಖರಾದ ಸಂದೀಪ ಬಿ. ಉಪಸ್ಥಿತರಿದ್ದರು. ಕಡಲು ಪ್ರಕಾಶನದ ಸಂಚಾಲಕ ನಾಗರಾಜ ಮಂಜಗುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next