Advertisement

ಲುವಾನ್‌ ಟೆನಿಸ್‌ಕ್ವಾರ್ಟರ್‌  ಫೈನಲ್ ಗೆ ಅಂಕಿತಾ

02:56 AM May 10, 2019 | Sriram |

ಲುವಾನ್‌ (ಚೀನ): ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ 60 ಸಾವಿರ ಡಾಲರ್‌ ಬಹುಮಾನದ ‘ಲುವಾನ್‌ ಟೆನಿಸ್‌ ಟೂರ್ನಿ’ಯ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರದ ಪಂದ್ಯದಲ್ಲಿ ಅವರು ಆತಿಥೇಯ ನಾಡಿನ ಯು ಯುವಾನ್‌ ಅವರನ್ನು 6-2, 6-3 ನೇರ ಸೆಟ್‌ಗಳಲ್ಲಿ ಪರಾಭವಗೊಳಿಸಿದರು.

Advertisement

26ರ ಹರೆಯದ ಅಂಕಿತಾ ರೈನಾ ಕ್ವಾ.ಫೈನಲ್ನಲ್ಲಿ ಹಾಂಕಾಂ ಗ್‌ನ ಯುಡಿಸ್‌ ಚಾಂಗ್‌ ಅವರನ್ನು ಎದುರಿಸಲಿದ್ದಾರೆ. ಚಾಂಗ್‌ ರ್‍ಯಾಂಕಿಂಗ್‌ನಲ್ಲಿ ಅಂಕಿತಾಗಿಂತ ಕೆಳ ಮಟ್ಟದಲ್ಲಿದ್ದಾರೆ (497). ಹೀಗಾಗಿ ಅಂಕಿತಾ ಸೆಮಿಫೈನಲ್ ಬಹುತೇಕ ಖಚಿತ ಎಂಬುದೊಂದು ಲೆಕ್ಕಾಚಾರ.

 

Advertisement

Udayavani is now on Telegram. Click here to join our channel and stay updated with the latest news.

Next