Advertisement

ಅಂಕಲಗಿ ಅಡವಿಸಿದ್ದೇಶ್ವರ ಮಹಾರಥೋತ್ಸವ 

05:23 PM May 03, 2018 | |

ರೋಣ: ತಾಲೂಕಿನ ಕೊತಬಾಳ ಗ್ರಾಮದ ಆರಾಧ್ಯ ದೇವ ಶ್ರೀ ಅಂಕಲಗಿ ಅಡವಿಸಿದ್ದೇಶ್ವರ ಮಹಾರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ಪ್ರಸಿದ್ಧ ಕಲಾತಂಡಗಳು, ಜಾಂಜ್‌ಮೇಳ, ಕರಡಿ ಮಜಲು, ನಂದಿಕೋಲು ಕುಣಿತಗಳ ಗಮನ ಸೆಳೆದವು. ನಾಡಿನ ಮೂಲೆಮೂಲೆಗಳಿಂದ ಭಕ್ತರು ಆಗಮಿಸಿದ್ದರು. ಹರಗುರು ಚರಮುರ್ತಿಗಳು ಹಾಜರಿದ್ದರು.

Advertisement

ಶ್ರೀಮಠದ ಪೀಠಾಧಿಪತಿ ಗಂಗಾಧರ ಶ್ರೀಗಳು ಹಾಗೂ ರೋಣ ಗುಲಗಂಜಿಮಠದ ಗುರುಪಾದ ಶ್ರೀಗಳು ರಥದ ಗಾಲಿಗೆ ಕಾಯಿ ಹಾಕಿ ಚಾಲನೆ ನೀಡಿದರು. ಐ.ಎಸ್‌. ಪಾಟೀಲ, ದಶರಥ ಗಾಣಿಗೇರ, ಬಸವರಾಜ ನವಲಗುಂದ, ಸಿದ್ದಣ್ಣ ಯಾಳಗಿ, ಬಸವರಾಜ ಪಾಗದ, ಶಂಕ್ರಣ್ಣ ಸಂಕಣ್ಣವರ, ಶೇಖಣ್ಣ ಕೋರಿ ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next