Advertisement

ಅಂಜುಶ್ರೀ ಸಾವಿಗೆ ಕಾರಣ ಆಹಾರವಲ್ಲ; ಕರುಳು ನಿಷ್ಕ್ರಿಯ…ಪ್ರಾಥಮಿಕ ವರದಿ

08:11 AM Jan 09, 2023 | Team Udayavani |

ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಿದ್ಯಾರ್ಥಿನಿ ಪೆರುಂಬಳ ಬೇನೂರಿನ ಅಂಬಿಕಾ ಅವರ ಪುತ್ರಿ ಅಂಜುಶ್ರೀ (19) ಸಾವಿಗೆ ವಿಷಾಹಾರ ಕಾರಣವಲ್ಲ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಹೇಳಿದೆ. ಕರುಳು ನಿಷ್ಕ್ರಿಯವಾಗಿತ್ತು ಹಾಗೂ ಹಳದಿ ಜ್ವರ ಬಾಧಿಸಿತ್ತು ಎಂದು ವರದಿಯಲ್ಲಿ ತಿಳಿಸಿದೆ. ಹೆಚ್ಚಿನ ತನಿಖೆಗಾಗಿ ಅವರ ಆಂತರಿಕ ಅವಯವಗಳನ್ನು ರಾಸಾಯನಿಕ ತಪಾಸಣೆಗಾಗಿ ಕಳುಹಿಸಲಾಗಿದೆ.

Advertisement

ಇದೇ ವೇಳೆ ಅಂಜುಶ್ರೀ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆಯೆಂದೂ ವರದಿಯಲ್ಲಿ ಹೇಳಿದೆ. ಆಹಾರದಲ್ಲಿನ ವಿಷ ಅಲ್ಲವೆಂದು ಫಾರೆನ್ಸಿಕ್‌ ಸರ್ಜನ್‌ ಅವರ ಅಭಿಪ್ರಾಯವಾಗಿದೆ. ವಿಷ ಕರುಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ವರದಿಯಲ್ಲಿ ವ್ಯಕ್ತಪಡಿಸಿದೆ.

ಶನಿವಾರ ಬೆಳಗ್ಗೆ ಅಂಜುಶ್ರೀ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಡಿ. 31ರಂದು ಕುಳಿಮಂದಿ ಸೇವಿಸಿದ ಕಾರಣ ಅಸ್ವಾಸ್ಥ್ಯ ಕಾಣಿಸಿಕೊಂಡಿತ್ತು. ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿತ್ತೆಂದು ಸಂಶಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಟೇಲ್‌ ಮಾಲಕ ಸಹಿತ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ವಿದ್ಯಾರ್ಥಿಗಳು, ಅಧ್ಯಾಪಕರು ಆಸ್ಪತ್ರೆಗೆ: ಪತ್ತನಂತಿಟ್ಟ ಚಂದನಪಳ್ಳಿ ರೋಸ್‌ ಡೈಲ್‌ ಶಾಲೆಯಲ್ಲಿ ವಿಷ ಆಹಾರ ಸೇವನೆಯಿಂದ 13 ಮಂದಿ ವಿದ್ಯಾರ್ಥಿಗಳು ಹಾಗು ಅಧ್ಯಾಪಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕನ್‌ ಬಿರಿಯಾನಿ ಸೇವಿಸಿದವರಿಗೆ ಅಸ್ವಾಸ್ಥ್ಯ ತಲೆದೋರಿದೆ. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಬಿರಿಯಾನಿ ನೀಡಲಾಗಿತ್ತು. ಬೆಳಗ್ಗೆ 11ಕ್ಕೆ ತಲುಪಿದ್ದ ಬಿರಿಯಾನಿ ವಿತರಣೆ ಸಂಜೆ ನಡೆದಿರುವುದಾಗಿ ಹೊಟೇಲ್‌ ಮಾಲಕ ತಿಳಿಸಿದ್ದಾರೆ. ಆಹಾರ ಸೇವಿಸಿದ ದಿನ ಯಾರಿಗೂ ಸಮಸ್ಯೆಯಾಗಿರಲಿಲ್ಲ. ಮರುದಿನ ಉದರ ಬೇನೆ ತಲೆದೋರಿತು. ವಿದ್ಯಾರ್ಥಿಗಳನ್ನು ಪತ್ತನಂತಿಟ್ಟದ ಮೂರು ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next