Advertisement
ಸಂಸ್ಥೆಯ ಆಡಳಿತ ಮಂಡಳಿ ಅಧಿಕಾರದ ಗದ್ದುಗೆಗಾಗಿ ಕುದುರೆ ಗುರುತಿನ ಮೊಹಮ್ಮದ್‌ಯುಸುಫ್ ಸವಣೂರ, ಒಂಟೆ ಗುರುತಿನ ಇಸ್ಮಾಯಿಲ್ಸಾಬ ಕಾಲೇಬುಡ್ಡೆ ಹಾಗೂ ತಕ್ಕಡಿ ಗುರುತಿನ ಅನ್ವರ ಮುಧೋಳ ಬಣಗಳ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಅಂತಿಮವಾಗಿ ಕುದುರೆ ಗುರುತಿನ ಸವಣೂರು ಬಣವು ಎಲ್ಲ ಕ್ಷೇತ್ರಗಳಲ್ಲಿ ಜಯದ ಕೇಕೆ ಹಾಕಿತು.
Related Articles
Advertisement
182 ಮತ ತಿರಸ್ಕೃತ: ಗೌರವ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಅಬ್ದುಲಮುನಾಫ ಎಫ್. ದೇವಗಿರಿ 3789 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಗೈಬುಸಾಬ ಎಂ. ಹೊನ್ನಾಳ್ಳಿ (3301 ಮತ) ಅವರನ್ನು 488 ಮತಗಳ ಅಂತರದಿಂದ ಸೋಲಿಸಿದರು. ಫಾರೂಕ್ ಅಹ್ಮದ ಎಂ. ಅಬ್ಬುನವರ 962 ಮತಗಳನ್ನಷ್ಟೆ ಪಡೆದರು. ಚಲಾವಣೆಯಾದ 8234 ಮತಗಳಲ್ಲಿ 182 ಮತಗಳು ತಿರಸ್ಕೃತವಾಗಿವೆ.
ಖೈರಾತಿಗೆ ಒಲಿದ ಜಯ: ಗೌರವ ಖಜಾಂಚಿ ಸ್ಥಾನಕ್ಕೆ ದಾದಾಹಯಾತ್ ಎ. ಖೈರಾತಿ 3017 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಬಾಬಾಜಾನ ಎ. ಚೌಧರಿ (2508 ಮತ) ಅವರನ್ನು 509 ಮತಗಳಿಂದ ಪರಾಭವಗೊಳಿಸಿದರು. ಇನ್ನುಳಿದಂತೆ ಮೊಹಮ್ಮದ ಇರ್ಷಾದ ಎ. ಬಳ್ಳಾರಿ 1092, ಅಬ್ದುಲ ಹಫೀಜ ಎ. ಮನಿಯಾರ 712, ಪರ್ವೇಜ ಜಿ. ಕೊಣ್ಣೂರ 642 ಮತಗಳನ್ನು ಪಡೆದಿದ್ದಾರೆ. ಚಲಾವಣೆಯಾದ 8236 ಮತಗಳಲ್ಲಿ 265 ಮತಗಳು ತಿರಸ್ಕೃತಗೊಂಡಿವೆ.
ಪಠಾಣ ವಿಜಯ: ಆಸ್ಪತ್ರೆ ಮಂಡಳಿ ಕಾರ್ಯದರ್ಶಿ ಸ್ಥಾನಕ್ಕೆ ಮೆಹಬೂಬ ಖಾನ ಎ. ಪಠಾಣ 3263 ಮತಗಳನ್ನು ಪಡೆದು ಮೊಹಿದ್ದೀನ ಖಾನ್ ಎ. ಪಠಾಣ (2943 ಮತ)ಅವರನ್ನು 320 ಮತಗಳಿಂದ ಸೋಲಿಸಿದ್ದಾರೆ. ಉಳಿದಂತೆ ಆಸಿಫ್ ಇಕ್ಬಾಲ ಎ. ಬಳ್ಳಾರಿ 932, ಅಹ್ಮದಖಾನ ಎ. ಬಾಗೇವಾಡಿ 853 ಮತಗಳನ್ನು ಪಡೆದಿದ್ದಾರೆ. ಚಲಾವಣೆಯಾದ 8233 ಮತಗಳಲ್ಲಿ 242 ಮತಗಳು ತಿರಸ್ಕೃತವಾಗಿವೆ.
ನಾಲ್ಕು ಸ್ಥಾನಕ್ಕೆ ಆಯ್ಕೆ: ಆಸ್ಪತ್ರೆ ಮಂಡಳಿಯ ಸದಸ್ಯರ ನಾಲ್ಕು ಸ್ಥಾನಕ್ಕೆ ಇತ್ತೇಹಾರ ಬಣದ ಅಕ್ಬರ ಡಬ್ಲ್ಯು. ಕುಮಟಾಕರ 3973 ಮತ, ಅಬ್ದುಲರಜಾಕ ಆರ್. ನಾಯ್ಕ 3775, ಮಹಮ್ಮದ ಸಿರಾಜ್ ಎಂ. ಪಲ್ಲವಾಲೆ 3560, ಸಮಿವುಲ್ಲಾ ಎಂ. ಬೆಳಗಾಂ 3698 ಮತಗಳನ್ನು ಪಡೆದು ಆಯ್ಕೆಯಾದರು. ಚಲಾವಣೆಯಾದ 8221 ಮತಗಳಲ್ಲಿ 185 ಮತಗಳು ತಿರಸ್ಕೃತಗೊಂಡಿವೆ.