Advertisement

ಚಿರತೆ, ಕರಡಿ ಹಾವಳಿ: 15 ದಿನಗಳ ಕಾಲ ಅಂಜನಾದ್ರಿ ಬಂದ್

08:55 PM Nov 10, 2020 | mahesh |

ಗಂಗಾವತಿ: ಆನೆಗೊಂದಿ ಅಂಜನಾದ್ರಿ ಬೆಟ್ಟದಲ್ಲಿ ಚಿರತೆ, ಕರಡಿಗಳ ಹಾವಳಿ ಹೆಚ್ಚಾಗಿರುವ ಕಾರಣ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ನ.12 ರಿಂದ 15 ದಿನಗಳ ಕಾಲ ಐತಿಹಾಸಿಕ ಪ್ರಸಿದ್ದತಾಣಗಳಾದ ಅಂಜನಾದ್ರಿ ಬೆಟ್ಟದ ಶ್ರೀಆಂಜನೇಯಸ್ವಾಮಿ ದೇಗುಲ, ಪಂಪಾಸರೋವರ, ಆದಿಶಕ್ತಿ ದೇಗುಲ ಮತ್ತು ಋಷಿಮುಖ ಪರ್ವತ ಸುಗ್ರೀವಾಂಜನೇಯ ದೇಗುಲಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ ಎಂದು ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ ಉದಯವಾಣಿ ಗೆ ತಿಳಿಸಿದ್ದಾರೆ.

Advertisement

ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ನಿರ್ಲಕ್ಷ್ಯ ಕುರಿತು ಉದಯವಾಣಿ ಪತ್ರಿಕೆಯಲ್ಲಿ‌ ವಿಸ್ತೃತ ವರದಿ ನ.8 ರಂದು ವರದಿ ಪ್ರಕಟವಾಗಿತ್ತು. ಕಳೆದ ಎರಡು ತಿಂಗಳಿಂದ ಆನೆಗೊಂದಿ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕರಡಿಗಳ ಹಾವಳಿ ಹೆಚ್ಚಾಗಿದ್ದು ಆದಿಶಕ್ತಿ ದೇಗುಲದ ಕೆಲಸಗಾರರನ್ನು ಚಿರತೆ ಕೊಂದುಹಾಕಿತ್ತು. ಜಂಗ್ಲಿ ರಂಗಾಪೂರದ ಮಹಿಳೆ ಹಾಗೂ ಪ್ರವಾಸಕ್ಕೆ ಆಗಮಿಸಿದ್ದ ಹೈದ್ರಾಬಾದ್ ಬಾಲಕನೊರ್ವನನ್ನು ಚಿರತೆ ಕಡಿದು ಗಾಯಗೊಳಿಸಿತ್ತು.

ನಿತ್ಯವೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ , ಕರಡಿಗಳು ಪ್ರತ್ಯಕ್ಷವಾಗುತ್ತಿದ್ದು ಜನರು ಭಯಭೀತರಾಗಿದ್ದಾರೆ. ಚಿರತೆ ಕರಡಿಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮಕೈಗೊಂಡಿದ್ದು ಡ್ರೋಣ್ ಮತ್ತು ಸಿಸಿ ಕ್ಯಾಮರಾಗಳ ಮೂಲಕ ಚಿರತೆ ಕರಡಿಗಳ ಜಾಗ ಪತ್ತೆ ಮಾಡಲಾಗುತ್ತಿದೆ.
ಸದ್ಯ ಜಿಲ್ಲಾಡಳಿತ ಆನೆಗೊಂದಿ ಅಂಜನಾದ್ರಿ ಭಾಗದ ದೇವಾಲಯಗಳ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿದ್ದು ಚಿರತೆಕರಡಿಗಳ ಸೆರೆ ಹಿಡಿದ ನಂತರ ಸಾರ್ಪುವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ ಎಂದು‌ ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next