Advertisement

ಅಂಜನಿ ಪುತ್ರ ಸಿನಿಮಾ ಪ್ರದರ್ಶನ ರದ್ದು

06:30 AM Dec 24, 2017 | |

ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಅಂಜನಿ ಪುತ್ರ’ ಚಿತ್ರ ಪ್ರದರ್ಶನಕ್ಕೆ ನಗರದ ಸಿಟಿ ಸಿವಿಲ್‌ ನ್ಯಾಯಾಲಯ ಜ.3 ರವರೆಗೆ ತಡೆಯಾಜ್ಞೆ ನೀಡಿದೆ. ಚಿತ್ರದ ದೃಶ್ಯವೊಂದರಲ್ಲಿ ವಕೀಲ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಲಾಗಿದೆ. 

Advertisement

ಈ ಸಂಭಾಷಣೆ ಯನ್ನು ಸಿನಿಮಾದಿಂದ ತೆಗೆಯಬೇಕು ಇಲ್ಲವೇ ಚಿತ್ರ ಪ್ರದರ್ಶನ ರದ್ದು ಪಡಿಸಬೇಕೆಂದು ನಾರಾಯಣಸ್ವಾಮಿ,
ಲಕ್ಷ್ಮೀನಾರಾಯಣ ಸೇರಿ ಐವರು ವಕೀಲರು ಸಿಟಿ ಸಿವಿಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಶನಿವಾರ ಅರ್ಜಿ ವಿಚಾರಣೆ ನಡೆಸಿದ 40ನೇ ಸಿವಿಲ್‌ ನ್ಯಾಯಾಲಯದ ನ್ಯಾ. ಕೋಮಲಾ, ಚಿತ್ರ ಪ್ರದರ್ಶನಕ್ಕೆ ತಡೆ ನೀಡಿದ್ದು, ಸಿನಿಮಾ ನಿರ್ಮಾಪಕ ಎಂ.ಎನ್‌.ಕುಮಾರ್‌, ನಿರ್ದೇಶಕ ಎ.ಹರ್ಷ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್‌ ಜಾರಿ ಮಾಡಿ ಆದೇಶಿಸಿದ್ದಾರೆ. ಅರ್ಜಿ ಕುರಿತು ವಾದ ಮಂಡಿಸಿದ ವಕೀಲ ನಾರಾಯಣಸ್ವಾಮಿ, ಅಂಜನಿ ಪುತ್ರ ಸಿನಿಮಾದಲ್ಲಿ ವಕೀಲ ವೃತ್ತಿಯನ್ನು ವ್ಯಂಗ್ಯವಾಗಿ ಚಿತ್ರಿಸಿದ್ದಾರೆ. ಪೊಲೀಸ್‌ ಅಧಿಕಾರಿಯೊಬ್ಬರು ವಕೀಲರನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ.

ಈ ಸಂಭಾಷಣೆಯಿಂದ ಇಡೀ ವಕೀಲ ವೃತ್ತಿಗೆ ಅಪಮಾನ ಮಾಡಲಾಗಿದೆ. ಚಿತ್ರದಲ್ಲಿನ ದೃಶ್ಯಗಳು ಅಪಾರ್ಥ ಸೂಚಿಸುತ್ತಿವೆ. ಆದ್ದರಿಂದ ಚಿತ್ರದಲ್ಲಿನ ಸಂಭಾಷಣೆ ತೆಗೆಯಬೇಕು ಎಂದು ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾ.ಕೋಮಲ ಜ.3ರವರೆಗೆ ಪ್ರದರ್ಶನಕ್ಕೆ ತಡೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next