Advertisement

ಆಂಜನೇಯಸ್ವಾಮಿ ಪ್ರಾಣ ಪ್ರತಿಷ್ಠಾಪನೆ

04:01 PM Nov 10, 2018 | Team Udayavani |

ಮಾಯಕೊಂಡ: ದೇವಾಲಯ ಗಳು ಮನುಷ್ಯರ ನಡುವೆ ಭಾವೈಕ್ಯತೆ ಬೆಸೆಯುವ ಕೇಂದ್ರಗಳಾಗಿ ಕೆಲಸ ನಿರ್ವಹಿಸುತ್ತವೆ ಎಂದು ಕೋಲಾರದ ಜ್ಞಾನಾನಂದ ಆಶ್ರಮದ ಶಿವಾತ್ಮಾನಂದ ಸ್ವಾಮೀಜಿ ನುಡಿದರು. ಅವರು ಗ್ರಾಮದಲ್ಲಿ ಆಂಜನೆಯ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನಾ
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

Advertisement

ಎಲ್ಲಾ ಸತ್ಕಾರ್ಯಗಳಿಗೆ ಭಗವಂತ ಪ್ರೇರಣೆ ಎಂದು ಭಾವಿಸಿ ನಾವು ಕೆಲಸ ಮಾಡಬೇಕು. ನಮಗೆ ಉಪಕಾರ ಮಾಡಿದವರನ್ನು ಎಂದಿಗೂ ಮರೆಯಬಾರದು ಎಂದರು. ಬೆಳಗ್ಗೆ ಗ್ರಾಮದ ಮತ್ತು ಸುತ್ತಮುತ್ತಲಿನ ದೇವತೆಗಳೊಂದಿಗೆ ಮಹಿಳೆಯರ ಪೂರ್ಣ ಕುಂಭ ಮೇಳ ನಡೆಯಿತು. ಹಲಗೆ,
ಡೊಳ್ಳು, ನಾದಸಿರಿ, ನಾಸಿಕುಡೊಳ್ಳು ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. 
 
ಬ್ರಾಹ್ಮಿ ಮುಹೂರ್ತದಲ್ಲಿ ಆಂಜನೇಯ ಸ್ವಾಮಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು, ದೇವಸ್ಥಾನ ಕಮಿಟಿ ಅಧ್ಯಕ್ಷರು ಸದಸ್ಯರು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು, ಸುತ್ತ ಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿವಾತ್ಮಾನಂದ ಸ್ವಾಮೀಜಿ, ವೀರೇಶ್‌ ಮತ್ತು ಕಟ್ಟಡ ನಿರ್ಮಾಣ ಉದ್ಯಮಿ ವೆಂಕಟಪ್ಪ ಪುರೋಹಿತ್‌, ವಿನಯರಾಜ್‌, ಮಹೇಶ್‌ ಮರಿಯಾಚಾರ್‌ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next