ರಾಣಿಬೆನ್ನೂರ: ಕೋವಿಡ್ 19 ತಡೆಗೆ ಮುಂಜಾಗ್ರತಾ ಕ್ರಮವಾಗಿ ಮಾ. 27 ರಿಂದ ಏ. 3ರ ವರೆಗೆ ನಡೆಯಬೇಕಿದ್ದ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಮತ್ತು ಶ್ರೀ ಮರಡಿಕೆಂಚಮ್ಮದೇವಿ ಜಾತ್ರಾ ಮಹೋತ್ಸವ ಮುಂದೂಡಲಾಗಿದೆ.
ಶನಿವಾರ ಮಾಕನೂರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಮತ್ತು ಗ್ರಾಮದ ಮುಖಂಡರು ಸಭೆ ಸೇರಿ ಸಾರ್ವಜನಿಕರ ಸಮ್ಮುಖದಲ್ಲಿ ಚರ್ಚಿಸಿ ಆಂಜನೇಯಸ್ವಾಮಿ ರಥೋತ್ಸವ ಮತ್ತು ಮರಡಿ ಕೆಂಚಮ್ಮದೇವಿ ಜಾತ್ರಾ ಮಹೋತ್ಸವವನ್ನು ಮುಂದೂಡಲು ತೀರ್ಮಾನಿಸಿದರು.
ಗ್ರಾಪಂ ಅಧ್ಯಕ್ಷ ಸದಾಶಿವನಗೌಡ ಮಲ್ಲನಗೌಡ್ರ ಮಾತನಾಡಿ, ದೇಶಾದ್ಯಂತ ಹರಡಿರುವ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ಮುಂದೂಡುವುದು ಅನಿವಾರ್ಯವಾಗಿದೆ. ಇದಕ್ಕೆ ಜನರು ಸಹಕಾರ ಅಗತ್ಯವಿದೆ ಎಂದರು.
ಆರೋಗ್ಯವೇ ಭಾಗ್ಯ ಆ ಭಾಗ್ಯವನ್ನು ಕಾಪಾಡಿಕೊಳ್ಳುವುದು ಸೂಕ್ತ. ದೇವಿಯ ಕೃಪಾಶೀರ್ವಾದದಿಂದ ಮಹಾಮಾರಿ ಕೊರೊನಾ ವೈರಸ್ ಯಾರಿಗೂ ತಗುಲದಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿಕೊಳ್ಳೋಣ. ಆ ತಾಯಿಯ ಕೃಪೆ ಇದ್ದರೆ ಮುಂದಿನ ದಿನಗಳಲ್ಲಿ ಜಾತ್ರೆಯನ್ನು ಮಾಡೋಣ ಪ್ರಸ್ತುತ ಕಾಲ ಪಕ್ವವಾಗಿಲ ಎಂದರು. ಅವರ ಮಾತಿಗೆ ಎಲ್ಲ ಭಕ್ತರು ಸಮ್ಮತಿಸಿದರು.
ಸತೀಶಗೌಡ ಮಲ್ಲನಗೌಡ್ರ, ದೇವೇಂದ್ರಪ್ಪ ಎಲಜಿ, ವಿನಯಕುಮಾರ ಮಲ್ಲನಗೌಡ್ರ, ಈರಣ್ಣ ಹಲಗೇರಿ, ನಾಗಪ್ಪ ಬಣಕಾರ, ಭೀಮಪ್ಪ ಪೂಜಾರ, ಚಂದ್ರಗೌಡ ಭರಮಗೌಡ್ರ, ಚಂದ್ರಶೇಖರ ಕುಂಬಳೂರ, ನಾಗಪ್ಪ ಬಾರ್ಕಿ, ಸಿದ್ದಪ್ಪ ಶಿರಗೇರಿ, ಹನುಮಂತಪ್ಪ ಕುಂಬಳೂರ, ರೇವಣೆಪ್ಪ ಹೊರಕೇರಿ, ಹನುಮಂತಗೌಡ ದೊಡ್ಡಗೌಡ್ರ, ಹನುಮಂತಗೌಡ ಭರಮಗೌಡ್ರ, ನಿಜಗುಣ ತಾವರಗೊಂದಿ, ಮಂಜಪ್ಪ ಬಾರ್ಕಿ ಸೇರಿದಂತೆ ಗ್ರಾಮಸ್ಥರು ಇದ್ದರು.