Advertisement

ನಾನೇ ಕಾಂಗ್ರೆಸ್ ಅಭ್ಯರ್ಥಿ ನನ್ನ ವಿರುದ್ಧ ಷಡ್ಯಂತ್ರ ನಡೆಯೋಲ್ಲ: ಆಡಿಯೋ ವೈರಲ್

12:22 PM Apr 19, 2022 | Team Udayavani |

ಗಂಗಾವತಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ನಾನೇ ಅಭ್ಯರ್ಥಿ, ಇದರಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರು ನನ್ನ ಜತೆ ಇದ್ದಾರೋ ಅಲ್ಲಿಯವರೆಗೆ ವಿರೋಧಿಗಳ ಷಡ್ಯಂತ್ರ ನಡೆಯುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ಆಡಿಯೋ ಸಂದೇಶದ ಮೂಲಕ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ.

Advertisement

ಇದೀಗ ಅನ್ಸಾರಿ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವೈರಲ್ ಮಾಡಿದ್ದಾರೆ.

ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗಂಗಾವತಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮೂರು ದಿನಗಳ ಹಿಂದೆ ಕಾಂಗ್ರೆಸ್ ಸೇರಿದ ಮುಖಂಡ ಸೇರಿ, ಹಲವರು ತಮ್ಮ ವಿರುದ್ಧ ಹಿಂದೂ ಮುಸ್ಲಿಂ ಹೀಗೆ ಅನೇಕ ಚಾಡಿ ಮಾತುಗಳನ್ನಾಡಿದ್ದು ಇದನ್ನು ಹರಿಪ್ರಸಾದ್ ಅವರೇ ಅಲ್ಲಗಳೆದಿದ್ದು ಕಾಂಗ್ರೆಸ್ ಕಾರ್ಯಕರ್ತರು ಈ ವಿಡಿಯೋ ವೈರಲ್ ಆಗಿರುವುದನ್ನು ನಿರ್ಲಕ್ಷ್ಯ  ಮಾಡಬೇಕು ಎಂದು ಅನ್ಸಾರಿ ಹೇಳಿದರು.

ಸ್ವತಃ ಹರಿಪ್ರಸಾದ್ ಅವರೇ ಹಿಂದೂ ಮುಸ್ಲಿಂ ಎಂದು ಮಾತನಾಡದಂತೆ ತಾಕೀತು ಮಾಡಿದರೂ ಇಲ್ಲಸಲ್ಲದ ದೂರು ನೀಡಿದ್ದು, ಇದು ಕ್ಷುಲ್ಲಕ ಕಾರ್ಯ. ಈಗಾಗಲೇ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದ ಮೂಲಕ ತಾವು ಪ್ರಥಮ ಸ್ಥಾನದಲ್ಲಿದ್ದು ಇದನ್ನು ಸಹಿಸದ ಕೆಲವರು ಷಡ್ಯಂತ್ರ ನಡೆಸುತ್ತಿದ್ದು ಇದು ನಡೆಯುವುದಿಲ್ಲ. ತಾವು ಎಲ್ಲವನ್ನು ಗಮನಿಸುತ್ತಿದ್ದು ಸೂಕ್ತ ಸಮಯದಲ್ಲಿ ಉತ್ತರ ಕೊಡಲಾಗುತ್ತದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ್ ಅವರುಗಳ ನಿರ್ದೇಶನದಂತೆ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದು,  ಮುಂದಿನ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಪಡೆದು ಗೆದ್ದು ಬರಲು ಕಾರ್ಯಕರ್ತರು ಕಾರ್ಯತಂತ್ರ ರೂಪಿಸಿದ್ದಾರೆ. ಉಳಿದ ಪಕ್ಷಗಳು ಮತ್ತು ತಮ್ಮ ವಿರೋಧಿಗಳ ಬಗ್ಗೆ ತಾವು ತಲೆ ಕೆಡಿಸಿಕೊಂಡಿಲ್ಲ ಎಂದರು.

ಇದನ್ನೂ ಓದಿ:ಕಾಪು: 51 ದಿನಗಳಲ್ಲಿ 9 ಸಾವಿರ ಕಿ.ಮೀ ಬೈಕ್ ಯಾತ್ರೆ; ಸಚಿನ್ ಶೆಟ್ಟಿ ತಂಡದ ಸಾಹಸ  

Advertisement

ಅಂಜನಾದ್ರಿ ಕ್ಷೇತ್ರ ಸರ್ವರಿಗೂ ಸೇರಿದ್ದು

ಅಂಜನಾದ್ರಿ ಕ್ಷೇತ್ರ ವಿಶ್ವದಲ್ಲಿ ಖ್ಯಾತಿ ಪಡೆದಿದ್ದು ಇಲ್ಲಿ ಹಿಂದೂ ಮುಸ್ಲಿಂ ಎಂಬ ಭಾವನೆ ಇಲ್ಲ. ಈ ಕ್ಷೇತ್ರ ಹಿಂದೂ, ಮುಸ್ಲಿಂ ಹಾಗೂ ಕ್ರೆಸ್ತ ಧರ್ಮ ಸೇರಿ ಎಲ್ಲರಿಗೂ ಸೇರಿದ್ದು ನಾನು ಎರಡು ಬಾರಿ ಶಾಸಕನಾಗಲು ಎಲ್ಲ ಧರ್ಮದ ಮತದಾರರು ಕಾರಣರಾಗಿದ್ದಾರೆ. ಆದ್ದರಿಂದ ಸರ್ವ ಸಮಾಜದವರ ಏಳಿಗೆಗಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾರ್ಯ ಮಾಡಿದ್ದೇನೆ ಎಂದು 4.28 ನಿಮಿಷದ ಆಡಿಯೋದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next