Advertisement

‘ಅಂಜನ್‌’ ಟ್ರೇಲರ್‌ ಬಂತು

04:05 PM Mar 09, 2022 | Team Udayavani |

ಹೊಸಬರ “ಅಂಜನ್‌’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಸಚಿವ ಡಾ.ಸಿ.ಅಶ್ವಥ್‌, ಶಾಸಕ ರವಿಸುಬ್ರಮಣ್ಯಂ ಚಿತ್ರದ ಟ್ರೇಲರ ರಿಲೀಸ್‌ ಮಾಡಿ, ಶುಭಕೋರಿದರು.

Advertisement

ಚಿತ್ರದಲ್ಲಿ ಅಂಜನ್‌ ನಾಯಕರಾಗಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಪ್ರಾರಂಭದಲ್ಲಿ ಹಳ್ಳಿ, ನಂತರ ಸಿಟಿಗೆ ಕತೆಯು ತೆಗೆದುಕೊಂಡು ಹೋಗುತ್ತದೆ. ಅಂಗವಿಕಲ, ಅಣ್ಣ ತಂಗಿ ಬಾಂದವ್ಯ ಮತ್ತು ರೌಡಿಗಳಾದವರ ಮನಸ್ಥಿತಿ, ಮನೆಸ್ಥಿತಿ ಹೇಗಿರುತ್ತದೆ. ಮನೆಯಲ್ಲಿ ತಂಗಿಯ ಮದುವೆ ಬಂದಾಗ, ಇಂತಹ ಪರಿಸ್ಥಿತಿಯಲ್ಲಿ ಅಣ್ಣನಾದವನು ಏನು ಮಾಡುತ್ತಾನೆ ಎಂಬ ವಿಷಯಗಳು ಇರಲಿದೆ. ತಂಗಿಯಾಗಿ ವಿಭೀಷ ತಾಯಿ ಪಾತ್ರದಲ್ಲಿ ಮಂಜುಳಮ್ಮ ನಟಿಸಿದ್ದಾರೆ. ಚಿತ್ರದಲ್ಲಿ ನಾನು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ಇದನ್ನೂ ಓದಿ:ಇಂದಿರಾ ಗಾಂಧಿ, ನಿಜಲಿಂಗಪ್ಪರನ್ನು ಬಂಗಾರದಲ್ಲಿ ತೂಗಿದ್ದೇವೆ, ಆದರೆ… : ಕಾರಜೋಳ ವಿಷಾದ

ಆರ್‌.ಸಾಗರ್‌ ಈ ಚಿತ್ರದ ನಿರ್ದೇಶಕರು. ಅವರು ಹೇಳುವಂತೆ ಸಿನಿಮಾ ಮಾಸ್‌, ಸೆಂಟಿಮೆಂಟ್‌ ಸನ್ನಿವೇಶಗಳಿಂದ ಕೂಡಿದೆ. ನಾಲ್ಕು ಹಾಡುಗಳು, ಐದು ಸಾಹಸಗಳು ಇದೆ. ಬೆಂಗಳೂರು, ಶಿವಮೊಗ್ಗ, ಶಂಕರಘಟ್ಟ, ಹೊನ್ನಾವರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ.

ನಿರ್ಮಾಪಕ ಪ್ರದೀಪ್‌ ಸೋನ್ಸ್‌ ಮಾತನಾಡಿ, ದಿ ಗಟ್ಸ್‌ ಆಫ್ ಹ್ಯೂಮನ್‌ ಅಂತ ಅಡಿಬರಹದಲ್ಲಿ ಇರುವಂತೆ ನಮ್ಮ ನಾಯಕ ಜಬರ್ದಸ್ತ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾನು ಡಾನ್‌ ಆಗಿ ಬಣ್ಣ ಹಚ್ಚಿದ್ದೇನೆ. ಆದಷ್ಟು ಬೇಗನೆ ರಿಲೀಸ್‌ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next