Advertisement
ಈ ತಂಡಗಳಲ್ಲಿ ಹತ್ತಿರದ ಹಳ್ಳಿಗಳ ಸಾಮಾ ನ್ಯ ಜನರು, ಪೆಟೊ›àಲ್ ಪಂಪ್ ಮತ್ತು ಡಾಬಾ ಗಳಲ್ಲಿ ಕೆಲಸ ಮಾಡುವವರು ಹಾಗೂ ಸಾಮಾಜಿಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವವರನ್ನು ಧೂತ್ ಕಾರ್ಯಕರ್ತ ರನ್ನಾಗಿ ಪೊಲೀಸ್ ಇಲಾಖೆಯಿಂದ ನೇಮಿಸ ಲಾಗುತ್ತೆ. ಈ ಕಾರ್ಯಕರ್ತರಿಗೆ ಅಪಘಾತ ನಡೆದ ಸಂದರ್ಭ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ತರಬೇತಿ ನೀಡಲಾಗಿದೆ.
Related Articles
Advertisement
ಥಾಣೆ ಪ್ರದೇಶದಲ್ಲಿ 546 ಧೂತ್ ಕಾರ್ಯಕರ್ತರಿದ್ದು 119 ಜೀವಗಳನ್ನು ಉಳಿಸಿದ್ದಾರೆ. ರಾಯಗಢ ಪ್ರದೇಶದಲ್ಲಿ 351 ಧೂತರಿದ್ದು, 34 ಅಪಘಾತಗಳಲ್ಲಿ 39 ಜೀವಗಳನ್ನು ಉಳಿಸಿದೆ. ನಾಗಪುರ ಪ್ರದೇಶದಲ್ಲಿ 635 ಧೂತರಿದ್ದು, ಒಂಬತ್ತು ಅಪಘಾತಗಳಲ್ಲಿ 15 ಜೀವಗಳನ್ನು ಉಳಿಸಿದ್ದಾರೆ.
ಅಪಘಾತದ ಬಳಿಕ ಗಾಯಗೊಂಡ ವ್ಯಕ್ತಿಯು ಒಂದು ಗಂಟೆಯೊಳಗೆ ಚಿಕಿತ್ಸೆ ಪಡೆಯಬೇಕು. ಇದನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಗಾಯಗೊಂಡ ವ್ಯಕ್ತಿಗೆ ಗೋಲ್ಡನ್ ಅವರ್ ಒಳಗೆ ಚಿಕಿತ್ಸೆ ಸಿಗದಿದ್ದರೆ, ಅವರನ್ನು ಉಳಿಸುವುದು ಕಷ್ಟವಾಗುತ್ತದೆ. ಆದ್ದರಿಂದ ನಾವು ಸಾಮಾನ್ಯ ಜನರನ್ನು ಮೃತ್ಯುಂಜಯ ಧೂತ್‌ರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಗಾಯಾಳುಗಳನ್ನು ಬೇಗನೆ ಆಸ್ಪತ್ರೆಗೆ ಕರೆದೊಯ್ಯಬಹುದು ಎಂದು ಹೆ¨ªಾರಿ ಸಂಚಾರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭೂಷಣ್ ಉಪಾಧ್ಯಾಯ ಅವರು ಹೇಳಿದ್ದಾರೆ.