Advertisement

ಹಳ್ಳಿ ಹುಡುಗನ ಬೆಂಕಿ ಗೆಟಪ್‌: ಅನೀಶ್‌ ಬರ್ತ್‌ಡೇಗೆ ಫೈರ್‌ ಆಯ್ತು ಟೈಟಲ್‌!

10:25 AM Jan 13, 2022 | Team Udayavani |

“ರಾಮಾರ್ಜುನ’ ಸಿನಿಮಾದ ನಂತರ ನಟ ಅನೀಶ್‌ ತೇಜೇಶ್ವರ್‌, ಸದ್ದಿಲ್ಲದೆ ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ಯೋಚನೆಯಲ್ಲಿದ್ದಾರೆ. ಈಗಾಗಲೇ ಈ ಹೊಸಚಿತ್ರದ ಚಿತ್ರೀಕರಣ ಶೇಕಡ 80ರಷ್ಟು ಪೂರ್ಣಗೊಂಡಿದ್ದು, ಅನೀಶ್‌ ಬರ್ತ್‌ಡೇ ಸಂದರ್ಭದಲ್ಲಿ ಈ ಚಿತ್ರದ ಟೈಟಲ್‌ ಅನೌನ್ಸ್‌ ಆಗಿದೆ. ಅಂದಹಾಗೆ, ಅನೀಶ್‌ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ “ಬೆಂಕಿ’ ಎಂದು ಟೈಟಲ್‌ ಇಡಲಾಗಿದ್ದು, ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಅನೀಶ್‌ ಪಕ್ಕಾ ಹಳ್ಳಿ ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ತಮ್ಮ ಹೊಸ ಚಿತ್ರ “ಬೆಂಕಿ’ಯ ಬಗ್ಗೆ “ಉದಯವಾಣಿ’ ಜೊತೆಗೆ ಮಾತಿಗಿಳಿದ ಅನೀಶ್‌, “ಇದು ನಾಯಕ ನಟನಾಗಿ ನನ್ನ ಹತ್ತನೇ ಸಿನಿಮಾ. ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳೆಲ್ಲ ಸಿಟಿ ಹಿನ್ನೆಲೆಯಲ್ಲಿ ಇದ್ದವು. ಆದ್ರೆ ಇದು ಕಂಪ್ಲೀಟ್‌ ವಿಲೇಜ್‌ ಹಿನ್ನೆಲೆಯ ಕಥೆ ಇರುವ ಸಿನಿಮಾ. ಮೊದಲ ಬಾರಿಗೆ ಇಂಥದ್ದೊಂದು ಸಬೆjಕ್ಟ್‌ನಲ್ಲಿ ಹಳ್ಳಿ ಹುಡುಗನ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನಗೂ ಇದು ನಟನಾಗಿ ಹೊಸಥರದ ಪಾತ್ರವಿರುವ ಸಿನಿಮಾ. ಹೊಸಥರದ ಬಾಡಿ ಲಾಂಗ್ವೇಜ್‌ ಇದೆ. ಹಣೆಗೆ ಬೊಟ್ಟು ಇಟ್ಟುಕೊಂಡು, ಕಾಲಿಗೆ ಚಪ್ಪಲಿ ಹಾಕಿಕೊಂಡು ಸಾದಾಸೀದಾ ಗೆಟಪ್‌ ನಲ್ಲಿ ಕಾಣಿಸಿಕೊಳ್ಳುತ್ತೇನೆ. ಇದರಲ್ಲಿ ಲವ್‌, ಸೆಂಟಿಮೆಂಟ್‌, ಆ್ಯಕ್ಷನ್‌ ಎಲ್ಲವೂ ಇದೆ. ಮುಖ್ಯವಾಗಿ ಅಣ್ಣ-ತಂಗಿಯ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಸಿನಿಮಾದ ಸಬ್ಜೆಕ್ಟ್ ಮ್ಯಾಚ್‌ ಆಗುತ್ತದೆ ಎಂಬ ಕಾರಣಕ್ಕೆ “ಬೆಂಕಿ’ ಅಂಥ ಟೈಟಲ್‌ ಇಟ್ಟಿದ್ದೇವೆ’ ಎಂದು ವಿವರಣೆ ಕೊಡುತ್ತಾರೆ.

“ಈಗಾಗಲೇ ಕೊಳ್ಳೆಗಾಲ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮೊದಲಾದ ಕಡೆಗಳಲ್ಲಿ ಸಿನಿಮಾದ ಶೇಕಡ 80ರಷ್ಟು ಶೂಟಿಂಗ್‌ ನಡೆಸಲಾಗಿದೆ. ಕರ್ನಾಟಕದ ಎಲ್ಲಾ ಗ್ರಾಮೀಣ ಭಾಗಗಳಿಗೂ ಅನ್ವಯವಾಗುವಂತೆ ಕಥೆಯ ನಿರೂಪಣೆ ಇದೆ. ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೂ ಶುರುವಾಗಿದೆ. ಇನ್ನು ಕೇವಲ ಮೂರು ಸಾಂಗ್ಸ್‌ ಶೂಟಿಂಗ್‌ ಮಾತ್ರ ಬಾಕಿಯಿದೆ. ಮೊದಲ ಹಂತವಾಗಿ ಈಗ ಸಿನಿಮಾದ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದೇವೆ’ ಎನ್ನುವ ಮಾಹಿತಿ ಅನೀಶ್‌ ಅವರದ್ದು.

ಇದನ್ನೂ ಓದಿ:ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಬಳಿ ಕ್ಷಮೆಯಾಚಿಸಿದ ನಟ ಸಿದ್ದಾರ್ಥ್

ಅಂದಹಾಗೆ “ಬೆಂಕಿ’ ಅನೀಶ್‌ ಅಭಿನಯದ ಹತ್ತನೇ ಚಿತ್ರವಾಗಲಿದೆ. ಚಿತ್ರದ ಪಾತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಂಡಿರುವ ಅನೀಶ್‌, ಪೋಸ್ಟರ್‌ನಲ್ಲಿ ಗಡ್ಡ ಮೀಸೆ ಬಿಟ್ಟು ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು “ಬೆಂಕಿ’ ಚಿತ್ರದಲ್ಲಿ ಅನೀಶ್‌ಗೆ ಜೋಡಿಯಾಗಿ “ರೈಡರ್‌’ ಸಿನಿಮಾ ಖ್ಯಾತಿಯ ಸಂಪದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Advertisement

ಉಳಿದಂತೆ ಶೃತಿ ಪಾಟೀಲ್, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ, ಸ್ವಾತಿ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರದ ಹಾಡುಗಳಿಗೆ ಕೌಶಿಕ್‌ ಹರ್ಷ ಸಂಗೀತ ಸಂಯೋಜಿಸಿದ್ದು, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣವಿದೆ. “ವಿಂಕ್‌ ವಿಷಲ್‌ ಪ್ರೊಡಕ್ಷನ್‌’ನಡಿ ಅನೀಶ್‌ ಚಿತ್ರಕ್ಕೆ ತಾವೇ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

ಒಟ್ಟಾರೆ “ಬೆಂಕಿ’ ಟೈಟಲ್‌ ಪೋಸ್ಟರ್‌ನಲ್ಲಿ ತಮ್ಮ ಹೊಸ ಲುಕ್‌ ಮೂಲಕ ಗಮನ ಸೆಳೆಯುತ್ತಿರುವ ಅನೀಶ್‌, ಇಡೀ ಸಿನಿಮಾದಲ್ಲಿ ಹೇಗೆ ಪ್ರೇಕ್ಷಕರನ್ನು ರಂಜಿಸುತ್ತಾರೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next