Advertisement

Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್‌ ಅರವಿಂದ ಸ್ವಾಮಿ ಹಾಡು ಹಬ್ಬ

02:56 PM Oct 04, 2024 | Team Udayavani |

ಅನೀಶ್‌ ತೇಜೇಶ್ವರ್‌ ನಾಯಕರಾಗಿರುವ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಆರಾಮ್‌ ಅರವಿಂದ ಸ್ವಾಮಿ’ ( Aram Arvind Swamy movie). ಈ ಚಿತ್ರ ನವೆಂಬರ್‌ 22ರಂದು ಬಿಡುಗಡೆಯಾಗಲಿದ್ದು, ಸದ್ಯ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. “ಮುಂದೆ ಹೇಗೋ ಏನೋ’ ಎಂಬ ಹಾಡು ಇದಾಗಿದೆ. ಅಭಿಷೇಕ್‌ ಶೆಟ್ಟಿ ಈ ಸಿನಿಮಾದ ನಿರ್ದೇಶಕರು.

Advertisement

ಮಾಸ್‌ ಸಿನಿಮಾಗಳ ಲ್ಲಿಯೇ ಹೆಚ್ಚಾಗಿ ನಟಿಸಿರೋ ಅನೀಶ್‌ ಆರಾಮ್‌ ಅರವಿಂದ್‌ ಸ್ವಾಮಿ ಸಿನಿಮಾ ಮೂಲಕ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ನಮ್‌ ಗಣಿ ಬಿಕಾಂ ಪಾಸ್‌, ಮತ್ತೆ ಗಜಾನನ ಆ್ಯಂಡ್‌ ಗ್ಯಾಂಗ್‌ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್‌ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಅನೀಶ್‌ ತೇಜೇಶ್ವರ್‌ಗೆ ಮಿಲನಾ ನಾಗರಾಜ್‌ ಹಾಗೂ ಹೃತಿಕ್‌ ಶ್ರೀನಿವಾಸ್‌ ಇಬ್ಬರು ನಾಯಕಿಯರು. “ಆರಾಮ್‌ ಅರವಿಂದ್‌ ಸ್ವಾಮಿ’ ಸಿನಿಮಾಗೆ ಅರ್ಜುನ್‌ ಜನ್ಯ ಟ್ಯೂನ್‌ ಹಾಕಿದ್ದಾರೆ.

“ಅಕಿರ’ ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್‌ ಪ್ರಸನ್ನ ಹಾಗೂ “ಗುಳ್ಟು’ ಸಿನಿಮಾ ನಿರ್ಮಾಪಕ ಪ್ರಶಾಂತ್‌ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೈವಿಬಿ ಶಿವಸಾಗರ್‌ ಛಾಯಾಗ್ರಹಣ, ಉಮೇಶ್‌ ಆರ್‌. ಬಿ. ಸಂಕಲನ ಈ ಸಿನಿಮಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next