Advertisement
ಪಿಯುಸಿ ಅನಂತರ ಮುಂದಿನ ಹಂತದ ಆಯ್ಕೆಯ ಕೋರ್ಸ್ ವ್ಯಕ್ತಿಯ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಆ ಕೋರ್ಸ್ ಆಯ್ಕೆಗೆ ಸಾಕಷ್ಟು ತಯಾರಿ, ಮುಂದಾಲೋಚನೆ ಇರಬೇಕಾಗುತ್ತದೆ. ಯೋಚಿಸಿ- ಯೋಜಿಸಿ ಹೆಜ್ಜೆ ಇಡಬೇಕಾದ ಸವಾಲಿನ ಕಾಲಘಟ್ಟವೂ ಇದಾಗಿದೆ.
Related Articles
Advertisement
ಪದವಿ ಮಾನ್ಯತೆಆ್ಯನಿಮೇಶನ್ ಕ್ಷೇತ್ರ ಈ ಮೊದಲು ತರಬೇತಿ ಪಡೆದುಕೊಂಡರೂ ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಿತ್ತು. ಆದರೆ ಗಣಕಯಂತ್ರ, ಮೊಬೈಲ್ ಜಗತ್ತು ವೃದ್ಧಿಯಾದಂತೆ ಆ್ಯನಿಮೇಶ ನ್ ಕ್ಷೇತ್ರಕ್ಕೂ ಮಾನ್ಯತೆ ಸಿಕ್ಕಿದೆ. ಆದರೆ, ಕಳೆದ ಕೆಲವು ವರ್ಷಗಳಿಂದೀಚೆಗೆ ಆ್ಯನಿಮೇಶ ನ್ ಕೋರ್ಸ್ ಕಲಿಕೆಗೆ ಪದವಿ ಮಾನ್ಯತೆ ಸಿಕ್ಕಿರುವುದರಿಂದ ಯಾವುದೇ ಆತಂಕವಿಲ್ಲದೆ, ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರಕಲೆ ಮತ್ತು ದೃಶ್ಯ ಮಾಧ್ಯಮದೆಡೆಗಿನ ಆಸಕ್ತಿಯೇ ಇದಕ್ಕೆ ಬೇಕಾದ ಮೊದಲ ಅರ್ಹತೆಯೇ ಹೊರತು ಪಿಯುಸಿಯ ಅಂಕದಲ್ಲಿ ಕೋರ್ಸ್ ಪ್ರವೇಶಾತಿ ನಿರ್ಧಾರವಾಗುವುದಿಲ್ಲ. ಮಂಗಳೂರಿನಲ್ಲಿ ಆ್ಯನಿಮೇಶನ್
ಆ್ಯನಿಮೇಷನ್ ಕಲಿಕೆಗೆ ಮಂಗಳೂರಿನಲ್ಲಿ ಸಾಕಷ್ಟು ಅವಕಾಶಗಳಿವೆ. ಅರೇನಾ ಮಲ್ಟಿ ಮೀಡಿಯಾ, ದ ವಿನ್ಸಿ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಶನ್ ಆಫ್ ಡಿಸೈನ್, ಝೀ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಆರ್ಟ್, ಮಾಯಾ ಅಕಾಡೆಮಿ ಆಫ್ ಎಡ್ವಾನ್ಸ್‌ಡ್ ಸಿನೆಮಾಟಿಕ್ಸ್, ಆ್ಯಂಬಿಟ್ ಆ್ಯನಿಮೇಶನ್ಸ್, ವೆಕ್ಟರ್ ಆ್ಯನಿಮೇಶನ್ ಅಕಾಡೆಮಿ ಸೇರಿದಂತೆ ಹಲವಾರು ಆ್ಯನಿಮೇಶನ್ ಕೋರ್ಸ್ ಕಲಿಕಾ ಸಂಸ್ಥೆಗಳು ಮಂಗಳೂರಿನಲ್ಲಿವೆ. ಗೂಗಲ್‌ನಲ್ಲಿ ಸರ್ಚ್ ನೀಡಿದರೆ ಮಂಗಳೂರಿನ ಆ್ಯನಿಮೇಶನ್ ಕಲಿಕಾ ಸಂಸ್ಥೆಗಳ ಜಗತ್ತೇ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಕೋರ್ಸ್‌ಗಳು ಹಲವು
ಆ್ಯನಿಮೇಶನ್‌ನಲ್ಲಿ 1 ಮತ್ತು 2 ವರ್ಷದ ಕೋರ್ಸ್‌ಗಳಿವೆ. 1 ವರ್ಷದ ಕೋರ್ಸ್ ನಲ್ಲಿ ಡಿಸೈನಿಂಗ್, 2ಡಿ ಆ್ಯನಿಮೇಶನ್ ಬಗ್ಗೆ ಕಲಿಯಬಹುದು. 2 ವರ್ಷದ ಕೋರ್ಸ್‌ನಲ್ಲಿ ವಿಶುವಲ್ ಎಫೆಕ್ಟ್, ಮೂವೀ ಮೇಕಿಂಗ್, 3ಡಿ ಆ್ಯನಿಮೇಶನ್ ಮುಂತಾದ ವಿಷಯಗಳನ್ನು ಕಲಿಸಲಾಗುತ್ತದೆ. 2ಡಿ ಆ್ಯನಿಮೇಶನ್ ಮತ್ತು 3ಡಿ ಆ್ಯನಿಮೇಶನ್‌ನಲ್ಲಿ ಪ್ರಸ್ತುತ ಅವಕಾಶಗಳು ಜಾಸ್ತಿ ಇವೆ. ಆ್ಯನಿಮೇಶನ್ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಇಲ್ಲಿದೆ ಉದ್ಯೋಗ ಆವಕಾಶ
ಮಾಧ್ಯಮ, ಸಿನೆಮಾ, ಜಾಹೀರಾತು ಕ್ಷೇತ್ರ, ಕಾರ್ಪೊರೇಟ್ ಕಂಪೆನಿಗಳಲ್ಲಿ ಆ್ಯನಿಮೇಶನ್ ಕೋರ್ಸ್ ಕಲಿತವರಿಗೆ ಬೇಡಿಕೆ ಇರುವುದರಿಂದ ಜೀವನದಲ್ಲಿ ಗೆಲುವು ಸಾಧಿಸಲು ಆ್ಯನಿಮೇಶನ್ ಕ್ಷೇತ್ರ ಅತ್ಯುತ್ತಮ ಆಯ್ಕೆ. ವಿದೇಶಿ ಕಂಪೆನಿಗಳಿಂದಲೂ ಭಾರತದ ಆ್ಯನಿಮೇಟರ್‌ಗಳಿಗೆ ಬೇಡಿಕೆ ಇರುವುದ ರಿಂದ ಕೈತುಂಬಾ ಸಂಬಳ ಗಳಿಸಲು ಈ ಕೋರ್ಸ್ ಆಯ್ಕೆಗೆ ಪ್ರಾಧಾನ್ಯ ನೀಡಬಹುದು. – ಧನ್ಯಾ ಬಾಳೆಕಜೆ