ಹಾಸನ: ಪಶು ವೈದ್ಯಾಧಿಕಾರಿಗಳು ಪ್ರಾಣಿಗಳಿಗೆ ದೇವರ ಸ್ವರೂಪದ್ದಂತೆ. ಪ್ರಾಣಿಗಳ ವೇದನೆ ಅರಿತು ಪಶು ವೈದ್ಯರು ಸೇವೆ ನೀಡಬೇಕು ಎಂದು ಜಿಪಂ ಸಿಇಒ ಕಾಂತರಾಜು ಅವರು ಹೇಳಿದರು.
ನಗರದ ಪಶು ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿಂದು ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ 2022-23ನೇ ಸಾಲಿನಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಜಿಲ್ಲೆಯ ಪಶು ವೈದ್ಯಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೂ ಸಂಪ್ರದಾಯದಲ್ಲಿ ಗೋವುಗಳ ನ್ನು ದೇವರು ಎಂದು ಪೂಜಿಸಿತ್ತಾರೆ. ಪಶು ವೈದಾಧಿಕಾರಿಗಳು ಆ ಗೋವುಗಳಿಗೆ ದೇವರಿದ್ದಂ ತೆ. ಮನುಷ್ಯರು ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ. ಆದರೆ ಪ್ರಾಣಿಗಳು ಹೇಳಿಕೊಳ್ಳಲಾ ಗದು. ಅವುಗಳ ವರ್ತನೆಗಳನ್ನು ಅರ್ಥಮಾಡಿಕೊಂಡು ಚಿಕಿತ್ಸೆ ನೀಡುವುದು ಶ್ರೇಷ್ಠವಾದ ಸೇವೆ ಎಂದು ಹೇಳಿದರು.
ಜಾನುವಾರು ಸಾಕಾಣಿಕೆ ರಾಜ್ಯದಲ್ಲೇ 2ನೇ ಸ್ಥಾನ: ಹೈನುಗಾರಿಕೆಯು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ಪ್ರಪಂಚದಾದ್ಯಾಂತ ವೈದ್ಯಕೀಯ ಸೇವೆ ಪರಿಣಾಮಕಾರಿಯಾಗಿ ಬದಲಾಗಿದ್ದು. ಜಿಲ್ಲೆಯಲ್ಲೂ ಕೈಗೆಟಕುವ ದರದಲ್ಲಿ ಈ ಸೇವೆ ದೊರೆ ಯಬೇಕಿದೆ ಎಂದ ಅವರು, ರಾಜ್ಯದಲ್ಲೇ ಅತೀ ಹೆಚ್ಚು ಜಾನುವಾರು ಇರುವ ಎರಡನೇ ಜಿಲ್ಲೆ ಹಾಸನ ಎಂಬುದು ಬಹಳ ಸಂತೋಷದ ವಿಷಯ. ಪಶುವೈದ್ಯರ ಸೇವೆ ಪ್ರಾಮಾಣಿಕತೆಯಿಂದ ಕೂಡಿರಬೇಕು. ವೈದ್ಯ ವೃತ್ತಿಯಲ್ಲಿ ಹಲವಾರು ಸವಾಲುಗಳಿವೆ. ಅವು ಗಳನ್ನು ಎದುರಿಸಿ ನಿಂತು ಸಮಾಜಕ್ಕೆ ಉತ್ತಮ ಕೊಡುಗೆಯಾಗಿ ನೀಡ ಬೇಕು ಎಂದು ಕಾಂತರಾಜ್ ಅವರು ಹೇಳಿದರು.
ತಂತ್ರಜ್ಞಾನ ಬಳಸಿಕೊಳ್ಳಿ: ಪ್ರಾಸ್ತಾವಿಕ ನುಡಿಗಳನ್ನಾಡಿದ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಕೆ.ಆರ್ ರಮೇಶ್ ಅವರು, ರೈತರು ಮತ್ತು ಪಶು ವೈದ್ಯಾಧಿಕಾರಿಗಳ ನಡುವೆ ಇರುವ ಸಂಬಂಧ ಅಮೂಲ್ಯವಾದದ್ದು. ವೈದ್ಯರು ಉತ್ತಮ ಸೇವೆ ನೀಡುವುದರ ಮೂಲಕ ಆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿ ಸಬೇಕು. ಇತ್ತೀಚಿನ ದಿನಗಳಲ್ಲಿ ತಂತ್ರ ಜ್ಞಾನವು ಸಾಕಷ್ಟು ಮುಂದುವರೆದಿದೆ. ಪಶು ವೈದ್ಯಕೀಯ ಸೇವೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹೈನು ಅನುಸಂಧಾನ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಸಿದ್ದರಾಮಣ್ಣ ಅವರು ಮಾತನಾಡಿ, ಮೆಲುಕು ಹಾಕುವ ಪ್ರಾಣಿಗಳ ಆಹಾರ ಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆ ಗಳು ಕುರಿತು ಹಾಗೂ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಕೆ.ಮದನ್ ಅವರು, ಪಶುವೈದ್ಯಕೀಯ ಚಿಕಿತ್ಸೆಯಲ್ಲಿ ಇತ್ತೀಚಿನ ಬೆಳವ ಣಿಗೆಗಳು ಕುರಿತು, ಹಾಸನ ಪಶುಪಾಲನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಸ್. ಸುಂದರೇಶನ್ ಅವರು, ಪಶುಪಾಲನಾ ಚಟುವಟಿಕೆ ಕೈಗೊಳ್ಳಲು ವಿವಿಧ ಯೋಜನೆಯಡಿ ಲಭ್ಯವಿರುವ ಆರ್ಥಿಕ ಸಹಾಯದ ಕುರಿತು ವಿಶೇ‚ಷ ಉಪನ್ಯಾಸ ನೀಡಿದರು.
ಹಾಸನದ ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ. ವಿ. ಗಿರೀಶ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ಎಸ್.ಎನ್ ನಾಗರಾಜ್ ಮತ್ತಿತರರು ಕಾರ್ಯ ಕ್ರಮದಲ್ಲಿ ಹಾಜರಿದ್ದರು.