Advertisement

ರೈತರ ನಿದ್ದೆಗೆಡಿಸಿದ ಕಾಡುಪ್ರಾಣಿಗಳು

10:20 PM Jan 24, 2021 | Team Udayavani |

ಸುಳ್ಯ: ಕಾಡಿನಲ್ಲಿ ಆಹಾರ ಹುಡುಕಿ ತಿಂದು ಬದುಕುತ್ತಿದ್ದ ಪ್ರಾಣಿ ಗಳು ಈಗ ಆಹಾರ ಅರಸಿ ನಾಡಿಗೆ ಬರ ಲಾರಂಭಿಸಿವೆ. ಇದರಿಂದ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

Advertisement

ತಾಲೂಕಿನ ಮಂಡೆಕೋಲು, ಕೊಲ್ಲಮೊಗ್ರ, ಆಲೆಟ್ಟಿ ಮುಂತಾದ ಪ್ರದೇಶಗಳಲ್ಲಿ ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಇವುಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜನರು ವಾಸಿಸುವ ಪ್ರದೇಶಗಳಿಗೆ ಬರುತ್ತಿರುವ ಆನೆಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. 2017 ರಲ್ಲಿ 19 ಪ್ರಕರಣಗಳು ದಾಖಲಾಗಿದ್ದವು. 2018 ರಲ್ಲಿ ಮೂರು ಪಟ್ಟು ಹೆಚ್ಚು ಆನೆಗಳು ನಾಡಿಗೆ ಬಂದು 60 ಪ್ರಕರಣಗಳು ದಾಖಲಾಗಿದ್ದವು. 2019-20 ರಲ್ಲಿ 32 ಪ್ರಕರಣಗಳು ದಾಖಲಾಗಿದ್ದರೆ, 2020-21 ನೇ ಸಾಲಿನಲ್ಲಿ ಒಟ್ಟು 60 ಪ್ರಕರಣಗಳು ದಾಖಲಾಗಿವೆ.

2017 ರಲ್ಲಿ 2,89,791 ರೂ.ಗಳನ್ನು ಪರಿಹಾರವಾಗಿ ಸ್ಥಳೀಯರಿಗೆ ನೀಡಲಾಗಿತ್ತು. ಇನ್ನು 2018, 2019 ರಲ್ಲಿ ಕ್ರಮವಾಗಿ 9,90,838 ರೂ. ಮತ್ತು 3, 87, 970 ವಿತರಿಸಲಾಗಿತ್ತು ಎಂದು ಸುಳ್ಯ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆದರೆ ಈ ಬಾರಿ ಕೇವಲ 4 ಜನರಿಗೆ 50,000 ರೂ.ಗಳು ಮಾತ್ರ ಮಂಜೂರಾಗಿದ್ದು 6, 85,430 ರೂ.ಗಳು ಸರಕಾರದಿಂದ ಇನ್ನಷ್ಟೇ ಬರಬೇಕಾಗಿದೆ.

ಈ ಮೊದಲು ಕಾಡುಗಳಲ್ಲಿ ಮಾತ್ರ ಓಡಾಡುತ್ತಿದ್ದ ಆನೆಗಳು ಈಗ ಕೆಲವು ರಸ್ತೆ ಬದಿಗಳಲ್ಲೂ ಕಾಣಲು ಸಿಗುತ್ತಿದೆ. ಇದರಿಂದ ಕಾಡಿನ ಬದಿಯಲ್ಲಿ ವಾಸಿಸುವ ಜನರು ರಾತ್ರಿ ಹೊತ್ತು ಮನೆಯಿಂದ ಹೊರಗೆ ಬರುವುದೇ ಕಷ್ಟವಾಗಿದೆ.

Advertisement

ಅಮರಮುಟ್ನೂರು, ನೆಲ್ಲೂರು ಕೆಮ್ರಾಜೆ, ಜಾಲೂರು ಮುಂತಾದ ಗ್ರಾಮಗಳ ಕೆಲವು ಪ್ರದೇಶಗಳಲ್ಲಿ ಕಾಡು ಕೋಣಗಳು ಕೂಡ ಕಂಡು ಬರುತ್ತಿದ್ದು ಜನರ ಆತಂಕ ಹೆಚ್ಚಿದೆ.

ಕಂದಕ ರಚನೆ :

ಅರಣ್ಯ ಇಲಾಖೆಯ ವತಿಯಿಂದ ಆನೆ ಬರುವ ಸಂಭವನೀಯ ಸ್ಥಳಗಳಲ್ಲಿ ಕಂದಕಗಳನ್ನು ರಚನೆ ಮಾಡಲಾಗುತ್ತಿದ್ದು ಕಳ್ಳಬೇಟೆ, ಸಕೀìಟ್‌ ಮುಖೇನ ಪ್ರಾಣಿಗಳ ಚಲನವಲನಗಳನ್ನು ಗಮನಿಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೂರು ನೀಡಿ :

ಕಾಡುಕೋಣ ಹಾಗೂ ಇತರ ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಅರಣ್ಯ ಇಲಾಖೆಗೆ ದೂರು ನೀಡಬಹುದು ಎಂದು ಸುಳ್ಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next