Advertisement

‘Animal’ ಸಕ್ಸಸ್ ಸಂಭ್ರಮ: ರಶ್ಮಿಕಾ – ರಣ್ಬೀರ್ ಕೆನ್ನೆಗೆ ಮುತ್ತಿಟ್ಟ ವಿಡಿಯೋ ವೈರಲ್

11:17 AM Jan 07, 2024 | Team Udayavani |

ಮುಂಬಯಿ: ‘ರಾಕ್ ಸ್ಟಾರ್’ ರಣಬೀರ್ ಕಪೂರ್ ವೃತ್ತಿ ಬದುಕಿನಲ್ಲಿ ದೊಡ್ಡ ಹಿಟ್ ತಂದು ಕೊಟ್ಟ ‘ಅನಿಮಲ್’ ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿ ಶನಿವಾರ ಚಿತ್ರತಂಡ ಪಾರ್ಟಿ ಮಾಡಿ ಸಂಭ್ರಮಿಸಿದೆ.

Advertisement

ಸಂದೀಪ್ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾ ಬಾಲಿವುಡ್ ಸಿನಿರಂಗಕ್ಕೆ ಒಂದು ದೊಡ್ಡ ಹಿಟ್ ತಂದುಕೊಟ್ಟಿದೆ. ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ 500 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಸಿನಿಮಾ ತೆರೆಕಂಡ 37 ದಿನ ಕಳೆದರೂ ಸಿನಿಮಾದ ಹವಾ ಇನ್ನು ಕೂಡ ಕೆಲ ಥಿಯೇಟರ್ ನಲ್ಲಿ ಜೋರಾಗಿದೆ.

ತಂದೆ – ಮಗನ ಕಥೆಯನ್ನು ಒಳಗೊಂಡಿರುವ ‘ಅನಿಮಲ್’ ನಲ್ಲಿ ಚಾಕ್ಲೇಟ್ ಬಾಯ್ ರಣ್ಬೀರ್ ಆ್ಯಕ್ಷನ್ ನಿಂದಲೇ ಸಖತ್ ಗಮನ ಸೆಳೆದಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ‘ಅನಿಮಲ್’ ಒಂದು ವಿಭಿನ್ನ ಪ್ರಯೋಗವಾಗಿದ್ದು, ಈ ಪ್ರಯೋಗದಲ್ಲಿ ಅವರು ಪ್ರೇಕ್ಷಕರನ್ನು ರಂಜಿಸಿ ಯಶಸ್ಸಾಗಿದ್ದಾರೆ.

ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆದ ಬಳಿಕ ‘ಅನಿಮಲ್’ ಚಿತ್ರತಂಡ ಸಕ್ಸಸ್ ಮೀಟ್ ಆಯೋಜನೆ ಮಾಡಿದ್ದು, ಇದರಲ್ಲಿ ಬಹುತೇಕ ಬಿಟೌನ್ ಸ್ಟಾರ್ಸ್ ಭಾಗಿಯಾಗಿದ್ದಾರೆ.

ಸಿನಿಮಾದಲ್ಲಿ ‘ಗೀತಾಂಜಲಿ’ ಯಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಸಕ್ಸಸ್ ಮೀಟ್ ನಲ್ಲಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಡ್ರೆಸ್ ನಲ್ಲಿ  ಅವರು ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisement

ರಣ್ಬೀರ್ ಅವರಿಗೆ ಹಗ್ ಮಾಡಿ, ಕೆನ್ನೆಗೆ ಮುತ್ತಿಟ್ಟು ನಗುಮುಖದಿಂದ ಕಾರ್ಯಕ್ರಮಕ್ಕೆ ರಶ್ಮಿಕಾ ಬಂದಿದ್ದು, ಕ್ಯೂಟ್ ಲುಕ್ಸ್ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬಾಬಿ ಡಿಯೋಲ್, ಅನಿಲ್ ಕಪೂರ್ ಹಾಗೂ ಇತರರು ಕ್ಯಾಮರಕ್ಕೆ ಪೋಸ್ ಕೊಟ್ಟಿದ್ದಾರೆ.

ಬಾಬಿ ಡಿಯೋಲ್, ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಟ್ರಿಪ್ಟಿ ಡಿಮ್ರಿ, ಸೌರಭ್ ಸಚ್‌ದೇವ, ಸಿದ್ಧಾಂತ್ ಕಾರ್ನಿಕ್, ಅನಿಲ್ ಕಪೂರ್, ಸಲೋನಿ ಬಾತ್ರಾ, ಸಂದೀಪ್ ರೆಡ್ಡಿ ವಂಗಾ ಮತ್ತು ನಿರ್ಮಾಪಕ ಭೂಷಣ್ ಕುಮಾರ್ ಮುಂತಾದವರು ಸಕ್ಸಸ್ ಮೀಟ್ ನಲ್ಲಿ ಭಾಗಿಯಾಗಿದ್ದಾರೆ.

ಆಲಿಯಾ ಭಟ್, ನೀತು ಕಪೂರ್, ಮಹೇಶ್ ಭಟ್, ರಿತೇಶ್ ದೇಶಮುಖ್, ಜೆನಿಲಿಯಾ ದೇಶ್ಮುಖ್, ಫರಾ ಖಾನ್, ವಿದ್ಯಾ ಬಾಲನ್, ರಾಶಾ ಥಡಾನಿ, ಮಾನುಷಿ ಛಿಲ್ಲರ್, ರಾಕುಲ್ ಪ್ರೀತ್ ಸಿಂಗ್, ಆಯುಷ್ಮಾನ್ ಖುರಾನಾ, ತಮನ್ನಾ ಭಾಟಿಯಾ ಮುಂತಾದ ಕಲಾವಿದರು ಕೂಡ ‘ಅನಿಮಲ್’ ಸಕ್ಸಸ್ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next