Advertisement

Rashmika Mandanna: ‘ಅನಿಮಲ್’ ನಲ್ಲಿ ‘ಗೀತಾಂಜಲಿ’ ಆದ ರಶ್ಮಿಕಾ; ಫಸ್ಟ್‌ ಲುಕ್‌ ಔಟ್

12:53 PM Sep 23, 2023 | Team Udayavani |

ಮುಂಬಯಿ:  ರಣ್ಬೀರ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಅನಿಮಲ್’ ಚಿತ್ರದ ಟೀಸರ್ ರಿಲೀಸ್ ಡೇಟ್ ಇತ್ತೀಚೆಗೆ ರಿವೀಲ್ ಆಗಿತ್ತು.

Advertisement

ಸಂದೀಪ್ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾದಲ್ಲಿ ರಣ್ಬೀರ್ ಕಪೂರ್ ಇದೆಂದೂ ಕಾಣಿಸಿಕೊಳ್ಳದ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರ ಪಾತ್ರದ ಪೋಸ್ಟರ್ ಮೂಲಕ ಚಿತ್ರತಂಡ ರಿವೀಲ್ ಮಾಡಿತ್ತು. ಇದೇ ಸೆ.28 ರಂದು ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.

ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಸೌತ್ ಬ್ಯೂಟಿ, ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಅವರ ಪಾತ್ರದ ಲುಕ್ ಹಾಗೂ ಕ್ಯಾರೆಕ್ಟರ್ ನೇಮ್ ಶನಿವಾರ(ಸೆ.23 ರಂದು) ರಿವೀಲ್ ಆಗಿದೆ.

ಇದನ್ನೂ ಓದಿ: Bigg Boss: ಊರ ಹಬ್ಬ ‘ಬಿಗ್ ಬಾಸ್ ಸೀಸನ್ 10’ ಆರಂಭಕ್ಕೆ ಡೇಟ್ ಫಿಕ್ಸ್

ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ‘ಗೀತಾಂಜಲಿ’ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕೆಂಪು ಸೀರೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಕೆಳಗೆ ‘ನಿಮ್ಮ ಗೀತಾಂಜಲಿ’ ಎಂದು ಬರೆಯಲಾಗಿದೆ.

Advertisement

ಡಿಸೆಂಬರ್ 1 ರಂದು ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ರಣ್ಬೀರ್, ರಶ್ಮೊಕಾಯ ಜೊತೆಗೆ ಬಾಬಿ ಡಿಯೋಲ್, ಅನಿಲ್ ಕಪೂರ್ ಸೇರಿದಂತೆ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next