Advertisement

ಚಿಗರಿಗೆ ಗುಂಡು ಹಾರಿಸಿದ ಇಬ್ಬರ ಸೆರೆ : ಬಂಧಿತರಿಂದ 28 ಜೀವಂತ ಗುಂಡುಗಳು ವಶಕ್ಕೆ

03:16 PM Dec 29, 2020 | Team Udayavani |

ಚನ್ನಮ್ಮ ಕಿತ್ತೂರು: ಸಮೀಪದ ಕುಲವಳ್ಳಿ ಗ್ರಾಮದ ಅರಣ್ಯದಲ್ಲಿ ಅಕ್ರಮವಾಗಿ ನುಗ್ಗಿ ಚಿಗರಿಗೆ ಗುಂಡು ಹಾರಿಸಿದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

Advertisement

ಬೆಳಗಾವಿಯ ವಿನಾಯಕ ನಗರದ ಉದ್ದವ ರಾಜೇಂದ್ರ ನಾಯಕ (30), ಕಾಕತಿ ದೇಸಾಯಿ ಗಲ್ಲಿಯ ಸಾಗರ ಯಲ್ಲೋಜಿ ಪಿಂಗಟೆ(31) ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನಿಬ್ಬರಾದ ಬೆಳಗಾವಿ ನೆಹರೂ ನಗರದ ಮಹಮ್ಮದ ಅಲಿ ಖಾನ್‌, ಕಿತ್ತೂರಿನ ಅತಾವುಲ್ಲಾ ಶೀಗಿಹಳ್ಳಿ ಎಂಬು ಆರೋಪಿಗಳು ಪರಾರಿಯಾಗಿದ್ದಾರೆ. ಅರಣ್ಯದಲ್ಲಿ ಗುಂಡು ಹಾರಿಸಿದ ಖದೀಮರಿಂದ ಜಿಂಕೆ ತಪ್ಪಿಸಿಕೊಂಡಿದೆ.

ಬಂಧಿತ ಆರೋಪಿಗಳಿಂದ ಒಂದು ಡಿಬಿಬಿಎಲ್‌ ಬಂದೂಕು, 28 ಜೀವಂತ ಗುಂಡುಗಳು, ಹೆಡ್‌ ಟಾರ್ಚ್‌ 2, ಚಾಕು 1, ವಾಕಿಟಾಕಿ 1,
ಸ್ಯಾಂಪಲ್‌ ಏರಗನ್‌ ಗುಂಡುಗಳು ನಾಲ್ಕು ಬಾಕ್ಸ್‌ ಹಾಗೂ ಮಾರುತಿ ಸ್ವಿಫ್ಟ್‌ ಡಿಸೈರ್‌ ಕಾರು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶ್ರೀನಾಥ ಕಡೋಲಕರ ತಿಳಿಸಿದ್ದಾರೆ.

ಇದನ್ನೂ ಓದಿ:ಧರ್ಮೇಗೌಡ ಆತ್ಮಹತ್ಯೆ ಪ್ರಕರಣ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಸಿಸಿಎಫ್‌ ಬಿ.ವಿ. ಪಾಟೀಲ, ಡಿಸಿಎಫ್‌ ಎಂ.ವಿ. ಅಮರನಾಥ, ಎಸಿಪಿ ಸಿ.ಬಿ. ಮಿರ್ಜಿ ಮಾರ್ಗದರ್ಶನ ನೀಡಿದ್ದರು. ಡಿಆರ್‌ಎಫ್‌ಒ
ಸಂಜಯ ಮಗದುಮ, ಗಾರ್ಡ್‌ ಅಜೀಜ್‌ ಮುಲ್ಲಾ, ಪ್ರವೀಣ ದೂಳಪ್ಪಗೋಳ, ಗಿರೀಶ ಮೆಕ್ಕೇದ , ರಾಜು ಹುಬ್ಬಳ್ಳಿ, ಮಹಮ್ಮದ್ ರಫೀಕ್‌ ತಹಶೀಲ್ದಾರ್‌, ಪ್ರಕಾಶ ಕಿರಬನವರ, ನವೀನ ಹಂಚಿನಮನಿ, ಪ್ರಕಾಶ ಕಳಗಡೆ ಕಾರ್ಯಾಚರಣೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next