Advertisement

ಮಾಯಿಂದಬಾಲೆಗುಡಿನಿರ್ಮಿಸಿಧಾರ್ಮಿಕಸೌರ್ಹಾದಕ್ಕೆಸಾಕ್ಷಿಯಾದಅನಿಲ್‌ ಲೋಬೋ

11:15 AM Apr 16, 2018 | |

ಮೂಡಬಿದಿರೆ: ಪುರಸಭಾ ಮಾಜಿ ಸದಸ್ಯ, ಉದ್ಯಮಿ ಅನಿಲ್‌ ಸಿಪ್ರಿಯನ್‌ ಲೋಬೋ ಅವರು ಕರಿಂಜೆ ಗ್ರಾಮ ಉಳ್ಳಾಲ ಕೋಟೆಯ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರಕ್ಕೆ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಮಾಯಿಂದ ಬಾಲೆ (ಮಾಣಿ ಬಾಲೆ)ದೈವದ ಗುಡಿಯನ್ನು ನಿರ್ಮಿಸಿಕೊಟ್ಟು ಭಕುತಿಗೆ ಮತದ ಮಿತಿ ಇಲ್ಲ ಎಂದು ತೋರಿಸಿ ಸಾಮಾಜಿಕ, ಧಾರ್ಮಿಕ ಸೌಹಾರ್ದಕ್ಕೊಂದು ಸಾಕ್ಷಿಯಾಗಿದ್ದಾರೆ.

Advertisement

ಐದು ಗುತ್ತು ನಾಲ್ಕು ಬರ್ಕೆ ಮನೆತನಗಳ ಆಡಳಿತ ಹೊಂದಿರುವ ಈ ಕ್ಷೇತ್ರದಲ್ಲಿ ಕುಮಾರ ದೈವ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗುಡಿಗಳಿವೆ. ಮಾಣಿ ಬಾಲೆ ದೈವವನ್ನು ಬ್ರಹ್ಮ ಬೈದರ್ಕಳ ಗುಡಿಯೊಳಗೇ ಆರಾಧಿಸಲಾಗುತ್ತಿದ್ದು ಇದಕ್ಕೊಂದು ಪ್ರತ್ಯೇಕ ಗುಡಿಯನ್ನು ತಮ್ಮ ವೆಚ್ಚದಲ್ಲಿ ನಿರ್ಮಿಸಿಕೊಡುವುದಾಗಿ ವರುಷದ ಹಿಂದೆ ಹೇಳಿಕೊಂಡಿದ್ದ ಅನಿಲ್‌ ಲೋಬೋ ಅವರ ಕೋರಿಕೆಯನ್ನು ಆಡಳಿತ ಮಂಡಳಿ ಮನ್ನಿಸಿದ್ದು ಮೂರು ತಿಂಗಳ ಅವಧಿಯಲ್ಲಿ ಈ ಗುಡಿ ಮೈದಳೆದು ನಿಂತಿದೆ. ಸ್ಥಳೀಯ ಉಮೇಶ ಪೂಜಾರಿ ಅವರು ಮಾಣಿ ಬಾಲೆ ಮೂರ್ತಿಗಾಗಿ ತಮ್ಮ ಜಾಗದಲ್ಲಿದ್ದ ಹಲಸಿನ ಮರ ನೀಡಿದ್ದರೆ, ಕಲ್ಲಮುಂಡ್ಕೂರಿನ ಕಾಷ್ಠ ಶಿಲ್ಪಿ ಉಮೇಶ ಆಚಾರ್ಯರು ಮೂರ್ತಿಯನ್ನು ಕಟೆದು ರೂಪಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next