Advertisement

‘ಕೈ’ಗೆ ಗುಡ್ ಬೈ ಹೇಳಿ ಅನಿಲ್ ಲಾಡ್ ಮರಳಿ ಬಿಜೆಪಿಗೆ?: ಹೌದೆನ್ನುತ್ತದೆ ಈ ಮೆಸೇಜ್

09:04 AM Sep 28, 2019 | keerthan |

ಬಳ್ಳಾರಿ: ಮಾಜಿ ಶಾಸಕ ಎಚ್. ಅನಿಲ್ ಲಾಡ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

Advertisement

ಮೂಲತಃ ಬಿಜೆಪಿಯವರಾಗಿದ್ದ ಎಚ್.ಅನಿಲ್ ಲಾಡ್ ಅವರು ದಶಕದ ಹಿಂದೆ ಅಂದರೆ 2008 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.  2008ರ ವಿಧಾನಸಭೆಯಲ್ಲಿ ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಜೆಪಿಯ ಹಾಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಕೇವಲ 1022  ಮತಗಳ ಅಂತರದಿಂದ ಸೋತಿದ್ದ ಅನಿಲ್ ಲಾಡ್ 2013 ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಅಂತರದಿಂದ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಇದೀಗ ಬದಲಾದ ರಾಜಕೀಯದ ಹಿನ್ನಲೆಯಲ್ಲಿ ಮತ್ತೆ ಬಿಜೆಪಿ ಗೂಡಿಗೆ ಸೇರಿಕೊಳ್ಳುತ್ತಿದ್ದಾರೆ ಎಂಬ ವದಂತಿಗಳು ಜಿಲ್ಲೆಯಲ್ಲಿ ಹಬ್ಬಿಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವ ಬಿ.ಶ್ರೀರಾಮುಲು ಅವರ ಸಮ್ಮುಖದಲ್ಲೇ ಮಾಜಿ ಶಾಸಕ ಎಚ್.ಅನಿಲ್ ಲಾಡ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳೂ ಕೂಡ ದಟ್ಟವಾಗಿ ಹಬ್ಬಿದೆ.

ಬ್ರೂಸ್ ಪೇಟೆ ಬ್ಲ್ಯಾಕ್ ಕಾಂಗ್ರೆಸ್ ಸಮಿತಿಯ ವಾಟ್ಸಾಪ್ ಗೂಪಿನಲ್ಲಿ ಸ್ವತಃ ಅನಿಲ್ ಲಾಡ್ ಅವರೇ ಬಿಜೆಪಿ ಸೇರ್ಪಡೆಯಾಗುವ ಕುರಿತು ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಆದರೆ, ಈ ಕುರಿತು ಅನಿಲ್ ಲಾಡ್  ಅವರಾಗಲಿ ಬಿಜೆಪಿ ನಾಯಕರಾಗಲಿ ಎಲ್ಲೂ ಪ್ರತಿಕ್ರಿಯಿಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರೇ  ಈ ಗಾಳಿ ಸುದ್ದಿಯನ್ನು ಹಬ್ಬಿಸಿರೋದು ಅಚ್ಚರಿ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next