Advertisement

ಮಲಬಾರ್‌ ಗೋಲ್ಡ್ ಮತ್ತು ಡೈಮಂಡ್‌ರಾಯಭಾರಿಯಾಗಿ ಅನಿಲ್ ಕಪೂರ್‌

12:57 AM Aug 02, 2019 | Sriram |

ಬೆಂಗಳೂರು: ವಿಶ್ವದಾದ್ಯಂತ 250 ಮಳಿಗೆ ಗಳನ್ನು ಹೊಂದಿರುವ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಚಿನ್ನಾಭರಣಗಳ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್‌ ಗೋಲ್ಡ್ ಮತ್ತು ಡೈಮಂಡ್ಸ್‌ ತನ್ನ ಬ್ರ್ಯಾಂಡ್‌ ರಾಯ ಭಾರಿಯಾಗಿ (ಬ್ರ್ಯಾಂಡ್‌ ಅಂಬಾಸಿಡರ್‌) ಬಾಲಿ ವುಡ್‌ ನಟ ಅನಿಲ್ ಕಪೂರ್‌ ಅವರನ್ನು ನೇಮಕ ಮಾಡಿಕೊಂಡಿದೆ.

Advertisement

ಮಲಬಾರ್‌ ಗೋಲ್ಡ್ ಮತ್ತು ಡೈಮಂಡ್ಸ್‌ನ ‘ಮಲಬಾರ್‌ ಪ್ರಾಮೀಸಸ್‌ ಎಂಬ ಹೊಸ ಟಿವಿ ವಾಣಿಜ್ಯ ಸರಣಿಗಳಲ್ಲಿ ಅನಿಲ್ ಕಪೂರ್‌ ಅವರು ಕಾಣಿಸಿ ಕೊಳ್ಳಲಿದ್ದು, ಈ ಟಿವಿ ಜಾಹೀರಾತನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಮಲಬಾರ್‌ ಗೋಲ್ಡ್ ಮತ್ತು ಡೈಮಂಡ್ಸ್‌ ಈಗಾಗಲೇ ಕರೀನಾ ಕಪೂರ್‌ ಖಾನ್‌, ತಮನ್ನಾ ಭಾಟಿಯಾ ಮತ್ತು ಮಿಸ್‌ವಲ್ಡ್ರ್ ಮನೂಷಿ ಚಿಲ್ಲಾರ್‌(2017) ಅವರನ್ನು ತನ್ನ ಬ್ರಾ ್ಯಂಡ್‌ ಅಂಬಾಸಿಡರ್‌ಗಳನ್ನಾಗಿ ನೇಮಕ ಮಾಡಿಕೊಂಡಿತ್ತು.

ಮಲಬಾರ್‌ ಗ್ರೂಪ್‌ನ ಅಧ್ಯಕ್ಷ ಎಂ.ಪಿ. ಅಹ್ಮದ್‌ ಮಾತನಾಡಿ, ‘ಮಲಬಾರ್‌ ಕುಟುಂಬಕ್ಕೆ ಅನಿಲ್ ಕಪೂರ್‌ ಅವರನ್ನು ಸ್ವಾಗತಿಸಲು ನಮಗೆ ಸಂತಸವೆನಿಸುತ್ತಿದೆೆ’ ಎಂದರು.

ನಟ ಅನಿಲ್ ಕಪೂರ್‌ ಮಾತನಾಡಿ, ‘ನಾನು ನಂಬಿಕೆ ಇಟ್ಟುಕೊಂಡಿರುವ ಮಲಬಾರ್‌ ಬ್ರ್ಯಾಂಡ್‌ನ್ನು ಶಿಫಾರಸು ಮಾಡುತ್ತೇನೆ ಮತ್ತು ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ನನ್ನ ಮೇಲೆ ಮಲಬಾರ್‌ ಗೋಲ್ಡ್ ಮತ್ತು ಡೈಮಂಡ್ಸ್‌ ಇಟ್ಟಿರುವ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದು ಹರ್ಷವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next