Advertisement

ಅನಿಲ್‌ ಆ್ಯಂಟನಿ BJP ಸೇರಲು PMO ದಿಂದಲೇ ಬಂದಿತ್ತು ಕರೆ- ಆ್ಯಂಟನಿ ಪತ್ನಿ ಹೇಳಿಕೆ

08:19 PM Sep 23, 2023 | Team Udayavani |

ತಿರುವನಂತಪುರ: ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿ ಬಿಜೆಪಿ ಸೇರ್ಪಡೆಯನ್ನು ಅವರ ತಾಯಿ ಎಲಿಜಬೆತ್‌ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರಧಾನಮಂತ್ರಿಗಳ ಕಚೇರಿಯಿಂದಲೇ ಫೋನ್‌ ಬಂದಿತ್ತು ಎಂಬ ಬಗ್ಗೆ ಪುತ್ರನೇ ನನಗೆ ಮಾಹಿತಿ ನೀಡಿದ್ದ ಎಂದು ಎಲಿಜಬೆತ್‌ ಹೇಳಿದ್ದಾರೆ. ಇದರಿಂದಾಗಿ ಕೇರಳದಲ್ಲಿ ಕಾಂಗ್ರೆಸ್‌ಗೆ ಮುಜುಗರ ಉಂಟಾಗಿದೆ.

Advertisement

ಇತ್ತೀಚೆಗೆ ಚರ್ಚ್‌ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭದಲ್ಲಿ ರಕ್ಷಣಾ ಖಾತೆ ಮಾಜಿ ಸಚಿವರ ಪತ್ನಿ ಮಾತನಾಡಿದ್ದ ವಿಡಿಯೋ ಈಗ ವೈರಲ್‌ ಆಗಿದೆ. “ನನ್ನ ಇಬ್ಬರು ಪುತ್ರರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಸಿಗಲಿ ಎಂದು ಪ್ರಾರ್ಥಿಸುತ್ತಾ ಇದ್ದೆ. ಆದರೆ, ಕಾಂಗ್ರೆಸ್‌ನ ಚಿಂತನ ಶಿಬಿರದಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ಒತ್ತು ನೀಡುವುದು ಬೇಡ ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಹೀಗಾಗಿ, ನನ್ನ ಪುತ್ರನಿಗೆ ಅವಕಾಶ ಸಿಗಲಿಲ್ಲ’ ಎಂದು ಹೇಳಿರುವ ಅಂಶ ವಿಡಿಯೋದಲ್ಲಿದೆ.

ಪತಿ ಅವಕಾಶ ಕೊಡಲಿಲ್ಲ:
ಪುತ್ರ ಅನಿಲ್‌ಗೆ ರಾಜಕೀಯದಲ್ಲಿ ಬೆಳೆಯಲು ಪತಿ ಆ್ಯಂಟನಿ ನೆರವು ನೀಡಲಿಲ್ಲ ಎಂದು ಹೇಳಿದ ಎಲಿಜಬೆತ್‌ ಆ್ಯಂಟನಿ, ಬಿಜೆಪಿಯಲ್ಲಿ ಅವಕಾಶ ಸಿಗುವ ಬಗ್ಗೆ ಮತ್ತು ಬಿಜೆಪಿ ಸೇರ್ಪಡೆ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿಯಿಂದ ಫೋನ್‌ ಬಂದಿತ್ತು. ಮೇರಿ ಮಾತೆ ನನ್ನ ಪ್ರಾರ್ಥನೆಯನ್ನು ಕೇಳಿಸಿಕೊಂಡು ಮಗನಿಗೆ ಬಿಜೆಪಿಯಲ್ಲಿ ಅವಕಾಶ ಸಿಗುವಂತೆ ಮಾಡಿದ್ದಾರೆ. ಜತೆಗೆ ಆ ಪಕ್ಷದ ಬಗ್ಗೆ ಇರುವ ಭಾವನೆಯನ್ನೂ ಬದಲಾಯಿಸಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next