ಅಹಮದಾಬಾದ್: ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ವಿರುದ್ಧ ಅನಿಲ್ ಅಂಬಾನಿ ಸಮೂಹ ಕಂಪೆನಿ 5 ಸಾವಿರ ಕೋಟಿ ರೂ.ಮೊತ್ತದ ಮಾನ ಹಾನಿ ಮೊಕದ್ದಮೆ ದಾಖಲಿಸಿದೆ.
ಸಂಸ್ಥೆಯ ವಿರುದ್ಧ ಸುಳ್ಳು, ಮಾನಹಾ ನಿಕರ ಮತ್ತು ಹುಸಿ ಆರೋಪ ಮಾಡಿದ್ದಾರೆ ಎಂದು ಕಂಪೆನಿ ಆರೋಪಿಸಿದ್ದು, ಗುಜರಾತ್ ಹೈಕೋರ್ಟ್ ನಲ್ಲಿ ದೂರು ದಾಖಲಿಸಲಾಗಿದೆ. ಮೂಲಗಳ ಪ್ರಕಾರ ದೇಶದಲ್ಲಿ ದಾಖಲಾದ ಮಾನಹಾನಿ ಪ್ರಕರಣಗಳಲ್ಲಿ ಪರಿಹಾರ ಕೇಳಿದ ಬೃಹತ್ ಮೊತ್ತ ಇದಾಗಿದೆ ಎಂದು ಹೇಳ ಲಾಗಿದೆ. ಈ ಹಿಂದೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ವಿತ್ತ ಸಚಿವ ಅರುಣ ಜೇಟ್ಲಿ ಹಾಗೂ ನಿತಿನ್ ಗಡ್ಕರಿ ತಲಾ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದು, ಭಾರೀ ಚರ್ಚೆಗೀಡಾಗಿತ್ತು.
ಸಿಂಘ್ವಿ ಏನು ಹೇಳಿದ್ದರು?: ನ.30 ರಂದು ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ಧಾಳಿ ನಡೆಸಿದ್ದ ಸಿಂಘ್ವಿ , ಭಾರೀ ಮೊತ್ತದ ಸಾಲ ಪಡೆದವರಿಗೆ ಸಾಲ ಮರುಪಾವತಿಯಲ್ಲಿ ರಿಯಾಯಿತಿ ನೀಡಿಲ್ಲ ಎಂದು ಜೇಟ್ಲಿ ಹೇಳುವ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಸರಕಾರ ಈಗಾಗಲೇ 1.88 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ದೇಶದ ಪ್ರಮುಖ 50 ಕಾರ್ಪೊರೇಟ್ ಸಂಸ್ಥೆಗಳು ಬ್ಯಾಂಕ್‌ಗಳಿಗೆ 8.35 ಲಕ್ಷ ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದೆ. ಈ ಪೈಕಿ ಪ್ರಮುಖ ಮೂರು ಸಂಸ್ಥೆಗಳಾದ ಅನಿಲ್ ಅಂಬಾನಿ ಸಮೂಹದ ರಿಲಯನ್ಸ್, ಅದಾನಿ ಮತ್ತು ಎಸ್ಸಾರ್ ಉದ್ಯಮ ಸಮೂಹ ಇದೆ. ಈ ಮೂರು ಕಂಪೆನಿಗಳೇ 3 ಲಕ್ಷ ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದೆ. ಇವುಗಳನ್ನು ಮರುಪಾವತಿ ಯಾ ಗದ ಸಾಲ ಎಂದು ಘೋಷಿಸುವ ಬದಲು, ರಫೇಲ್ ಡೀಲ್‌ನಂತಹ ರಕ್ಷಣಾ ಒಪ್ಪಂದಗಳನ್ನು ನೀಡುವ ಮೂ ಲಕ ಈ ಸುಸ್ತಿ ದಾರರಿಗೆ ಜೇಟ್ಲಿ ಸಹಾಯ ಮಾಡಿದ್ದಾರೆ ಎಂದು ಸಿಂಘ್ವಿ ಆರೋಪಿಸಿದ್ದರು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ರಿಲಯನ್ಸ್ ಸಮೂಹವು, ರಿಲಯನ್ಸ್ ಏರೋಸ್ಟ್ರಕ್ಚರ್ ಲಿಮಿಟೆಡ್ ಮತ್ತು ಡಸಾಲ್ಟ್ ಏವಿಯೇಶನ್ ಒಪ್ಪಂದದಲ್ಲಿ ಡಸಾಲ್ಟ್ ರಿಲಾಯನ್ಸ್ ಏರೋ ಸ್ಪೇಸ್ ಲಿಮಿಟೆಡ್ ಸ್ಥಾಪಿಸಲಾಗಿದೆ. ಇದಕ್ಕೂ ಸರಕಾರಕ್ಕೂ ಯಾವುದೇ ನೇರ ಸಂಬಂಧ ವಿಲ್ಲ. ಸರಕಾರ ಮನ್ನಾ ಮಾಡಿರುವುದು ಆಫ್ಸೆಟ್ ಹೊಣೆಗಾರಿಕೆಗಳನ್ನಾಗಿದ್ದು, ಇದು ಸರಕು ಮತ್ತು ಸೇವೆಗಳನ್ನು ರಫ್ತು ಮಾಡಿದ್ದಕ್ಕೆ ಕಂಪನಿಯು ಸರಕಾರಕ್ಕೆ ಪಾವತಿ ಮಾಡುವ ರಫ್ತು ಶುಲ್ಕವಾಗಿದೆ ಎಂದು ಸಂಸ್ಥೆ ಹೇಳಿದೆ.