ಪ್ರೀತಿ ಅಂದರೆ ಏನು ಅಂತ ಗೊತ್ತಿರದ ಮುಗ್ದ ಹುಡುಗ ನಾನು. ಕಾಲೇಜು ದಿನಗಳಲ್ಲಿ ಹುಡುಗಿಯರನ್ನು ಮಾತಾನಾಡಿಸಲು ನಾಚಿಕೆಯಿಂದ ಹಿಂದೆ ಸರಿಯುತ್ತಿದ್ದೆ. ಪ್ರೀತಿ ಪ್ರೇಮ ಎಂದು ಯಾರ ಹಿಂದೆಯೂ ಹೋದವನಲ್ಲ. ಕೈಯಲ್ಲಿ ಆಡ್ರಾಯ್ಡ್ ಫೋನ್ ಬಂದ ಮೇಲೆ ಶುರುವಾಯ್ತು ನನ್ನ ಪ್ರೀತಿಯ ಕಹಾನಿ. ಪ್ರತಿ ದಿನವನ್ನೂ ಪೋನ್‌ನಲ್ಲಿ ಟೈಂ ಪಾಸ್ ಮಾಡುತ್ತಾ ದಿನ ಕಳೆಯತೊಡಗಿದ್ದೆ. ಫೇಸ್ ಬುಕ್‌ನಲ್ಲಿ ಪರಿಚಯವಾದ ಅವಳ ಮತ್ತು ನನ್ನ ಸ್ನೇಹ ಹಾಯ್ ಬಾಯ್ ಅಂತ ಸಾಗುತ್ತಿತ್ತು. ದಿನಗಳು ಕಳೆದಂತೆ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸತೊಡಗಿದೆವು. ಆದರೆ ಒಬ್ಬರಿಗೊಬ್ಬರು ಹೇಳಿಕೊಳ್ಳುವಂಥ ಧೈರ್ಯ ಮಾಡಲಿಲ್ಲ. ನಮ್ಮಿಬ್ಬರ ಪ್ರೀತಿಯ ಪಯಣದಲ್ಲಿ ಪ್ರತಿ ದಿನ ಲೆಕ್ಕಕ್ಕೆ ಸಿಗದಷ್ಟು ಮೆಸೇಜ್. ದಿನ ನಿತ್ಯ ಏನಿಲ್ಲ ಅಂದರೂ ಸುಮಾರು 3 ರಿಂದ 4 ತಾಸು ಸಮಯ ಅವಳಿಗಾಗಿಯೇ ಮೀಸಲಾಗಿತ್ತು…
ಹೀಗಿದ್ದಾಗಲೇ, ಅವಳು ಅದೊಂದಿ ದಿನ ಹೇಳದೇ ಕೇಳದೆ ಎದ್ದು ಹೋಗಿಯೇ ಬಿಟ್ಟಳು. ಕಾರಣ ಕೇಳ್ಳೋಣವೆಂದರೆ ಫೋನು ಸ್ವಿಚ್ ಆಫ್. ಮನಸು ಕೊಟ್ಟು ಜೊತೆಗಿದ್ದವಳು, ಮನಸ್ಸನ್ನೆ ಮರೆತರೆ ಹೇಗೆ ನನ್ನ ಮನಸ್ಸಿನ ಭಾವನೆಗಳನ್ನು ಯಾರ ಬಳಿ ಹೇಳಿಕೊಳ್ಳಲಿ?
ವೆಂಕಟೇಶ್ ಸಿ. ಭೀಮಸಮುದ್ರ