Advertisement

ಎಂಜಿರ-ಲಾವತ್ತಡ್ಕ: ಗ್ಯಾಸ್‌ ಟ್ಯಾಂಕರ್‌ ಪಲ್ಟಿ

11:50 AM May 26, 2017 | Team Udayavani |

ನೆಲ್ಯಾಡಿ: ಮಂಗಳೂರಿನಿಂದ ಗ್ಯಾಸ್‌ ತುಂಬಿಕೊಂಡು ಹೋಗುತ್ತಿದ್ದ ಗ್ಯಾಸ್‌ ಟ್ಯಾಂಕರ್‌ ಒಂದು ಎದುರಿನಿಂದ ಬಂದ ಟಿಪ್ಪರ್‌ ಗೆ ಢಿಕ್ಕಿ ಹೊಡೆದು ಮಗುಚಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿಯ ಎಂಜಿರ-ಲಾವತ್ತಡ್ಕ ಎಂಬಲ್ಲಿ ನಡೆದಿದೆ.

Advertisement

ಗುಂಡ್ಯ ಕಡೆಯಿಂದ ಡಾಮರ್‌ ಪ್ಯಾಚ್‌ ವಕ್ಸì ಮುಗಿಸಿ ಹಿಂದಿರುಗುತ್ತಿದ್ದ ಟಿಪ್ಪರ ಒಂದಕ್ಕೆ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್‌ ಟ್ಯಾಂಕರ್‌ ಢಿಕ್ಕಿ ಹೊಡೆದಿದ್ದು ,ಅಪಘಾತದ ರಭಸಕ್ಕೆ ಗ್ಯಾಸ್‌ ಟ್ಯಾಂಕರ್‌ ರಸ್ತೆಯ ಬದಿಗೆ ಮಗುಚಿ ಬಿದ್ದಿದೆ. ಗ್ಯಾಸ್‌ ತುಂಬಿದ ಟ್ಯಾಂಕರ್‌ ಪಲ್ಟಿಯಾದರೂ ಅದೃಷ್ಟವಷಾತ್‌ ಗ್ಯಾಸ್‌ ಸೋರಿಕೆಯಾಗದಿದ್ದುದರಿಂದ ಅಪಾಯ ಸಂಭವಿಸಲಿಲ್ಲ. ಟಿಪ್ಪರ್‌ ವಾಹನದಲ್ಲಿದ್ದ ಚಾಲಕ ಮುಸ್ತಾಕ್‌ 30 ವ, ಸಫ‌ìರೋಜ್‌ 26 ವ, ಸಿದ್ದಿಕ್‌ 35 ವ, ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಘಟನೆ ನಡೆದ ತಕ್ಷಣ ಕ್ವಿಕ್‌ ರೆಸ್ಪಾನ್ಸ್‌ ವೆಹಿಕಲ್‌ನ ಸಿಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ಧರ್ಮಸ್ಥಳ ಠಾಣೆಯ ಎಸೈ ರಾಮನ್ಯಾಕ್‌ ಹಾಗೂ ಸಿಬಂದಿಗಳು  ಮತ್ತು ನೆಲ್ಯಾಡಿ ಹೊರಠಾಣಾ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಲಾವತ್ತಡ್ಕದ ಈ ತಿರುವಿನಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು ವೇಗನಿಯಂತ್ರಕಗಳನ್ನು ಅಳವಡಿ ಸುವಂತೆ ಸಾರ್ವಜನಿಕರು ಹೆದ್ದಾರಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next