Advertisement

ಆಂಜಿಯೋಪ್ಲಾಸ್ಟಿ ಕಾರ್ಯಾಗಾರ

11:35 PM Sep 18, 2019 | Lakshmi GovindaRaju |

ಬೆಂಗಳೂರು: ನಗರದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಅಮೆರಿಕದ ಮೆಡ್ರ್ಟಾನಿಕ್ಸ್‌ ಹಾಗೂ ವಿಸ್ಕಿನ್‌ ಸನ್‌ (ಅಮೆರಿಕ) ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್‌ ಫೌಂಡೇಷನ್‌ ಸಹಯೋಗದಲ್ಲಿ 200 ರೋಗಿಗಳಿಗೆ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಹಮ್ಮಿಕೊಂಡಿದೆ.

Advertisement

ಅ. 11, 12, ಮತ್ತು 14ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹಾಗೂ ಅ.15 ಮತ್ತು 16ರಂದು ಮೈಸೂರಿನ ಜಯದೇವ ಶಾಖೆಯಲ್ಲಿ 200 ಮಂದಿ ಬಡರೋಗಿಗಳಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಉನ್ನತ ಗುಣಮಟ್ಟದ ಮೆಡಿಕೇಟೆಡ್‌ ಸ್ಟಂಟ್‌ಗಳನ್ನು ಉಚಿತವಾಗಿ ಅಳವಡಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ.

ಹೆಸರನ್ನು ನಿರ್ದೇಶಕರ ಕಚೇರಿ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರು ಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್‌, ಬೆಂಗಳೂರು-69 ಇಲ್ಲಿ ಅಕ್ಟೋಬರ್‌ 1, 2019ರೊಳಗೆ ನೋಂದಾಯಿಸಿ ಕೊಳ್ಳಬೇಕು ಎಂದರು.

ಹೆಚ್ಚಿನ ಮಾಹಿತಿಗೆ
ಬೆಂಗಳೂರು ಶಾಖೆ:
8431239166 ಅಥವಾ 080-22977433
ಮೈಸೂರು ಶಾಖೆ: 7892293016 ಅಥವಾ 0821- 2336255 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next